Select Your Language

Notifications

webdunia
webdunia
webdunia
webdunia

ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾ ಕೇವಲ 12 ಏಕದಿನ ಪಂದ್ಯ

ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾ ಕೇವಲ 12 ಏಕದಿನ ಪಂದ್ಯ
ಮುಂಬೈ , ಮಂಗಳವಾರ, 20 ಜೂನ್ 2023 (08:40 IST)
ಮುಂಬೈ: ಅಕ್ಟೋಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾ ಒಟ್ಟು 12 ಏಕದಿನ ಪಂದ್ಯಗಳನ್ನು ಆಡಲಿದೆ.

ಏಕದಿನ ವಿಶ್ವಕಪ್ ನಂತಹ ಪ್ರತಿಷ್ಠಿತ ಟೂರ್ನಿಗೆ ಸಿದ್ಧತೆ ನಡೆಸಲು ಭಾರತ ತಂಡಕ್ಕೆ ಈ ಕಿರು ಅವಕಾಶ ಸಾಕಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಇಷ್ಟೇ ಪಂದ್ಯಗಳಲ್ಲಿ ಭಾರತ ತನ್ನ ಬಲಿಷ್ಠ ಆಟಗಾರರನ್ನು ಗುರುತಿಸಿ ವಿಶ್ವಕಪ್ ಗೆ ಆಯ್ಕೆ ಮಾಡಬೇಕು.

ಇದರ ನಡುವೆ ಹಿರಿಯರು ಪದೇ ಪದೇ ವಿಶ್ರಾಂತಿ ಪಡೆಯುವುದು ಬೇರೆ. ಹೀಗಾದರೆ ವಿಶ್ವಕಪ್ ಗೆ ತಯಾರಿ ನಡೆಸಲು ಭಾರತಕ್ಕೆ ಸಿಗುವುದು ಸೀಮಿತ ಅವಕಾಶವಷ್ಟೇ. ಭಾರತದಲ್ಲೇ ಪಂದ್ಯ ನಡೆಯುವುದರಿಂದ ಈ ಟೂರ್ನಿ ಗೆಲ್ಲುವುದು ಪ್ರತಿಷ್ಠೆಯ ವಿಚಾರ. ಅದರಲ್ಲೂ ಕಳೆದ 10 ವರ್ಷಗಳಿಂದ ಯಾವುದೇ ಐಸಿಸಿ ಟೂರ್ನಿಯಲ್ಲಿ ಯಶಸ್ಸು ಗಳಿಸಲು ಸಾಧ‍್ಯವಾಗದೇ ಇರುವ ಕಾರಣ ಐಸಿಸಿ ಪ್ರಶಸ್ತಿಯ ಬರ ನೀಗಿಸಿಕೊಳ್ಳಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದ ಈ ಕ್ರಿಕೆಟಿಗರು ಹೋಟೆಲ್ ಉದ್ಯಮಿಗಳು