ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಕೆಲವು ದಿನಗಳ ಮೊದಲು ಸಾಂಪ್ರದಾಯಿಕವಾಗಿ ಮರು ಮದುವೆಯಾಗಿದ್ದರು.
ಪುತ್ರ ಅಗಸ್ಥ್ಯ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಹಾರ್ದಿಕ್ ದಂಪತಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ಉತ್ತರ ಭಾರತದ ಕೆಲವು ಮದುವೆ ಸಂಪ್ರದಾಯಗಳಲ್ಲಿ ವರನ ಚಪ್ಪಲಿ ಅಡಗಿಸಿಡುವ ಸಂಪ್ರದಾಯವಿದೆ.
ಇದೇ ರೀತಿ ಹಾರ್ದಿಕ್ ಶೂಗಳನ್ನು ಅವರ ಸಹೋದರಿ ಪಂಖೂರಿ ಅಡಗಿಸಿಟ್ಟಿದ್ದರು. ಇದನ್ನು ಮರಳಿಸಲು ಅವರು ಹಾರ್ದಿಕ್ ಗೆ 1 ಲಕ್ಷ ರೂ. ಗಳ ಬೇಡಿಕೆಯಿಟ್ಟಿದ್ದರು. ತಕ್ಷಣವೇ ಹಾರ್ದಿಕ್ ಸಹೋದರಿಗೆ 5 ಲಕ್ಷ ರೂ.ಗಳಷ್ಟು ಹಣ ಟ್ರಾನ್ಸ್ ಫರ್ ಮಾಡಿಸಿ ಮದುವೆ ಶೂ ವಾಪಸ್ ಪಡೆದಿದ್ದಾರೆ! ಈ ಹಳೆಯ ವಿಡಿಯೋವೊಂದು ಈಗ ವೈರಲ್ ಆಗಿದೆ.