Publish Date: Sun, 18 Jun 2023 (08:20 IST)
Updated Date: Sun, 18 Jun 2023 (08:45 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಣೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಇದಕ್ಕೆ ಕಾರಣ ರಾಹುಲ್ ದ್ರಾವಿಡ್ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚ್ ಅವಧಿಯಲ್ಲಿ ಟೀಂ ಇಂಡಿಯಾದಿಂದ ಬಂದಿಲ್ಲ.
ಮುಂಬರುವ ಏಕದಿನ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಗುತ್ತಿಗೆ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಇದಾದ ಬಳಿಕ ರಾಹುಲ್ ದ್ರಾವಿಡ್ ಗುತ್ತಿಗೆ ಅವಧಿ ಮುಂದುವರಿಸುವ ಸಾಧ‍್ಯತೆ ಕಡಿಮೆ ಎನ್ನಲಾಗಿದೆ.