ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕುಟುಂಬದ ಜೊತೆ ಪ್ರವಾಸದಲ್ಲಿದ್ದಾರೆ.
ಅಜ್ಞಾತ ಸ್ಥಳದಲ್ಲಿ ರೋಹಿತ್, ಪತ್ನಿ ರಿತಿಕಾ ಹಾಗೂ ಮಗಳ ಜೊತೆ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಈ ನಡುವೆ ರೋಹಿತ್ ಶರ್ಮಾ ಮಾಡಿದ ಸಾಹಸದ ವಿಡಿಯೋವೊಂದನ್ನು ರಿತಿಕಾ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
ರಿತಿಕಾ ಮೊಬೈಲ್ ಫೋನ್ ನೀರಿನಲ್ಲಿ ಬಿದ್ದುಹೋಗಿತ್ತು. ಹೀಗಾಗಿ ರೋಹಿತ್ ತಾವೇ ನೀರಿಗೆ ಧುಮುಕಿ ಫೋನ್ ಹುಡುಕಾಡಿ ಮೇಲೆ ತಂದಿದ್ದಾರೆ. ಈ ವಿಡಿಯೋವನ್ನು ರಿತಿಕಾ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು, ಗಂಡನ ಸಾಹಸವನ್ನು ಕೊಂಡಾಡಿದ್ದಾರೆ.