ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಟೆಸ್ಟ್ ಸರಣಿಗೆ ಮುಂದಿನ ವಾರ ತಂಡದ ಆಯ್ಕೆ ನಡೆಯಲಿದೆ.
ಈ ತಂಡದಿಂದ ಕೆಲವು ಹಿರಿಯ ಆಟಗಾರರಿಗೆ ಗೇಟ್ ಪಾಸ್ ನೀಡಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಸಾಧ‍್ಯತೆಯಿದೆ. ಪರ್ಫಾರ್ಮೆನ್ಸ್ ಮಾಡದ ಆಟಗಾರರಿಗೆ ಮುಲಾಜಿಲ್ಲದೇ ಗೇಟ್ ಪಾಸ್ ನೀಡಲು ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ.
ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಚೇತೇಶ್ವರ ಪೂಜಾರ ಪರ್ಫಾರ್ಮ್ ಮಾಡುವುದೇ ಅಪರೂಪಕ್ಕೆ. ಅವರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆಯಿದೆ. ಹಿರಿಯ ವೇಗಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಗೆ ವಿಶ್ರಾಂತಿ ಸಿಗಬಹುದು. ಉಮೇಶ್ ಯಾದವ್ ಗೂ ಕೊಕ್ ನೀಡುವ ಸಾಧ‍್ಯತೆಯಿದೆ. ಇವರ ಬದಲು ಐಪಿಎಲ್ ಹೀರೋ ಯಶಸ್ವಿ ಜೈಸ್ವಾಲ್ ತಂಡಕ್ಕೆ ಎಂಟ್ರಿ ಕೊಡಬಹುದು. ವೇಗದ ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್, ಉಮ್ರಾನ್ ಮಲಿಕ್ ಗೆ ಅವಕಾಶ ಸಿಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಹಾರ್ದಿಕ್ ಪಾಂಡ್ಯಗೆ ಮತ್ತೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಗುವ ಸಾಧ‍್ಯತೆಯಿದೆ. ಆದರೆ ವಿರಾಟ್ ಕೊಹ್ಲಿ, ಅಜಿಂಕ್ಯಾ ರೆಹಾನೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬಹುದು.