Publish Date: Sat, 17 Jun 2023 (08:40 IST)
Updated Date: Sat, 17 Jun 2023 (08:59 IST)
ಮುಂಬೈ: ಗಾಯದ ಸಮಸ್ಯೆಯಿಂದಾಗಿ ಸುಮಾರು ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿರುವ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಬ್ಯಾಟಿಗ ಶ್ರೇಯಸ್ ಅಯ್ಯರ್ ಸದ್ಯದಲ್ಲೇ ಕ್ರಿಕೆಟ್ ಕಣಕ್ಕೆ ಮರಳಲಿದ್ದಾರೆ.
ಸೆಪ್ಟೆಂಬರ್ ನಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ಏಷ್ಯಾ ಕಪ್ ನಡೆಯಲಿದ್ದು, ಈ ಮಹತ್ವದ ಟೂರ್ನಿ ವೇಳೆಗೆ ಇಬ್ಬರೂ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.
ಸದ್ಯಕ್ಕೆ ಇಬ್ಬರೂ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರೂ ಸ್ಟಾರ್ ಆಟಗಾರರು ಬೆನ್ನು ನೋವಿನಿಂದಾಗಿ ಹೊರಗುಳಿದಿದ್ದಾರೆ. ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಬುಮ್ರಾ, ಶ್ರೇಯಸ್ ಅನುಪಸ್ಥಿತಿ ತಂಡದ ಮೇಲೆ ಪರಿಣಾಮ ಬೀರಿತ್ತು. ಇದೀಗ ಇಬ್ಬರೂ ವಾಪಸ್ ಆಗುತ್ತಿರುವುದು ಸಿಹಿ ಸುದ್ದಿಯಾಗಿದೆ.