Publish Date: Tue, 20 Jun 2023 (10:09 IST)
Updated Date: Tue, 20 Jun 2023 (10:16 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾಲಿಗೆ ಇಂದು ವಿಶೇಷ ದಿನ. ಅವರು ಇಂದು ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟು 12 ವರ್ಷವಾಗಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಗಂಗೂಲಿ ನಂತರ ಆಕ್ರಮಣಕಾರಿ ಮನೋಭಾವ ತಂದ ಮತ್ತೊಬ್ಬ ಕ್ರಿಕೆಟಿಗ ಎಂದರೆ ವಿರಾಟ್ ಕೊಹ್ಲಿ. ಎಲ್ಲಾ ಫಾರ್ಮ್ಯಾಟ್ ಗಳಲ್ಲಿ ಟೆಸ್ಟ್ ಕ್ರಿಕೆಟ್ ನನಗೆ ಅತ್ಯಂತ ಹೆಚ್ಚು ಇಷ್ಟ ಎಂದು ಕೊಹ್ಲಿ ಹಲವು ಬಾರಿ ಹೇಳಿದ್ದರು.
2011 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೊಹ್ಲಿ ಇದುವರೆಗೆ 109 ಟೆಸ್ಟ್ ಪಂದ್ಯವಾಡಿದ್ದು 8,479 ರನ್ ಗಳಿಸಿದ್ದಾರೆ. ಇದರಲ್ಲಿ 28 ಶತಕಗಳೂ ಸೇರಿದೆ. ನಾಯಕನಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 40 ಗೆಲುವು ಸಂಪಾದಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತಕ್ಕೆ ಸರಣಿ ಗೆಲುವು ಕೊಡಿಸಿದ ಏಕೈಕ ನಾಯಕ. ಕೊಹ್ಲಿಯ ವಿಶೇಷ ದಿನಕ್ಕೆ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ.