ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯುತ್ತಾರಾ ಎಂಬ ವಿಚಾರವಾಗಿ ಗೊಂದಲ ಮುಂದುವರಿದಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋಲಿನ ಬಳಿಕವೂ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯುತ್ತಾರೆ ಎಂಬ ಸುದ್ದಿಯಿತ್ತು. ಆದರೆ ರೋಹಿತ್ ಗೆ ವಿಶ್ರಾಂತಿ ನೀಡಬಹುದು ಎಂದು ಇತ್ತೀಚೆಗೆ ಕೆಲವು ವರದಿಯಾಗುತ್ತಿದೆ.
ಇದೀಗ ಒಂದು ತಿಂಗಳ ಬಿಡುವು ಸಿಕ್ಕಿರುವ ಕಾರಣ ವಿಶ್ರಾಂತಿಯ ನೆಪ ಹೂಡುವ ಸಾಧ‍್ಯತೆ ಕಡಿಮೆ. ಹಾಗಿದ್ದಲ್ಲಿ ಬೇರೆಯವರಿಗೆ ನಾಯಕ ಪಟ್ಟ ಕಟ್ಟಿದ್ದರೆ ಇದು ರೋಹಿತ್ ರನ್ನು ನಿಧಾನವಾಗಿ ತೆರೆಮರೆಗೆ ತಳ್ಳುವ ಯತ್ನ ಎನ್ನಬಹುದು. ಯಾವುದಕ್ಕೂ ಜೂನ್ 27 ರಂದು ನಡೆಯಲಿರುವ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.