Publish Date: Sat, 01 Jul 2023 (08:10 IST)
Updated Date: Sat, 01 Jul 2023 (08:18 IST)
ಲಂಡನ್: ವೆಸ್ಟ್ ಇಂಡೀಸ್ ನಲ್ಲಿ ಟೆಸ್ಟ್, ಏಕದಿನ, ಟಿ20 ಸರಣಿ ಆಡಲು ಟೀಂ ಇಂಡಿಯಾ ಕೆರೆಬಿಯನ್ ನಾಡಿಗೆ ತೆರಳಿದೆ.
ಆದರೆ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಂಡದ ಜೊತೆಗೆ ಪ್ರಯಾಣಿಸಿಲ್ಲ. ಅವರು ಮುಂದಿನ ವಾರ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ರೋಹಿತ್ ಶರ್ಮಾ ಪತ್ನಿ, ಮಗಳ ಜೊತೆ ಪ್ಯಾರಿಸ್ ಪ್ರವಾಸದಲ್ಲಿದ್ದರೆ, ಕೊಹ್ಲಿ ಲಂಡನ್ ಪ್ರವಾಸದಲ್ಲಿದ್ದಾರೆ. ಇಬ್ಬರೂ ಇನ್ನೂ ರಜಾ ಮಜಾದಲ್ಲಿಯೇ ಇದ್ದಾರೆ. ಅವರ ಹೊರತಾಗಿ ವಿಂಡೀಸ್ ತಲುಪಿರುವ ಟೀಂ ಇಂಡಿಯಾ ಪಡೆ ಅಭ್ಯಾಸ ಆರಂಭಿಸಲಿದೆ.