Select Your Language

Notifications

webdunia
webdunia
webdunia
webdunia

ಇನ್ ಸ್ಟಾಗ್ರಾಂನಲ್ಲಿ ಜನ್ಮದಿನಾಂಕವನ್ನೇ ಬದಲಿಸಿದ ರಿಷಬ್ ಪಂತ್! ಕಾರಣವೇನು ಗೊತ್ತಾ?!

ಇನ್ ಸ್ಟಾಗ್ರಾಂನಲ್ಲಿ ಜನ್ಮದಿನಾಂಕವನ್ನೇ ಬದಲಿಸಿದ ರಿಷಬ್ ಪಂತ್! ಕಾರಣವೇನು ಗೊತ್ತಾ?!
ನವದೆಹಲಿ , ಗುರುವಾರ, 29 ಜೂನ್ 2023 (16:55 IST)
Photo Courtesy: Instagram

ನವದೆಹಲಿ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ರಸ್ತೆ ಅಪಘಾತದಲ್ಲಿ ಗಾಯಗೊಂಡು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಅವರೀಗ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಜನ್ಮದಿನಾಂಕವನ್ನು ಬದಲಾಯಿಸಿ ಸುದ್ದಿಯಾಗಿದ್ದಾರೆ.

ಕಳೆದ ವರ್ಷ ಕೊನೆಯಲ್ಲಿ ರಿಷಬ್ ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದಲ್ಲೆ, ಬೆಂಕಿ ಹತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಸ್ಥಳೀಯ ಬಸ್ ನಿರ್ವಾಹಕರ ಸಹಾಯದಿಂದ ರಿಷಬ್ ಪವಾಡ ಸದೃಶವಾಗಿ ಬದುಕಿ ಆಸ್ಪತ್ರೆ ಸೇರಿದ್ದರು. ಒಂದು ವಾರದ ಬಳಿಕ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. 

ಇದೀಗ ರಿಷಬ್ ಚೇತರಿಸಿಕೊಳ್ಳುತ್ತಿದ್ದು, ನಡೆದಾಡುತ್ತಿದ್ದಾರೆ. ಜೊತೆಗೆ ಸಣ್ಣ ಪ್ರಮಾಣದಲ್ಲಿ ವರ್ಕೌಟ್ ಕೂಡಾ ಶುರು ಮಾಡಿದ್ದಾರೆ. ಇದೀಗ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ನನ್ನ ಎರಡನೇ ಜನ್ಮದಿನಾಂಕ 5/01/23 ಎಂದು ಬರೆದುಕೊಂಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಆಶಸ್ ಟೆಸ್ಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್