Publish Date: Sat, 01 Jul 2023 (17:47 IST)
Updated Date: Sat, 01 Jul 2023 (17:49 IST)
ಕಾಬೂಲ್: ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ ಜೊತೆ ಮೈದಾನದಲ್ಲಿ ನಡೆದ ಸಂಘರ್ಷವನ್ನು ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್ ಉಲ್ ಹಕ್ ಇನ್ನೂ ಮರೆತಂತೆ ಕಾಣುತ್ತಿಲ್ಲ. ಪದೇ ಪದೇ ಈ ವಿಚಾರದ ಬಗ್ಗೆ ನವೀನ್ ಮಾತನಾಡುತ್ತಲೇ ಇರುತ್ತಾರೆ.
ಇದೀಗ ಈ ಘಟನೆ ನಡೆದು ಸರಿಯಾಗಿ ಎರಡು ತಿಂಗಳು ಕಳೆದ ಬಳಿಕ ನವೀನ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸಿಂಹ, ಕತ್ತೆ ಮತ್ತು ಹುಲಿಯೊಂದು ಫೈಟ್ ಮಾಡುವ ವಿಡಿಯೋ ಪ್ರಕಟಿಸಿ ಪರೋಕ್ಷವಾಗಿ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ.
ಮೂರ್ಖರ ಜೊತೆ ಗುದ್ದಾಡುವುದರಿಂದ ಸಮಯ ಹಾಳಾಗುವುದಲ್ಲದೆ ಮತ್ತೇನೂ ಆಗದು. ಅವರು ಯಾವತ್ತಿಗೂ ಸತ್ಯ ಏನೆಂದು ಅರಿಯಲು ಪ್ರಯತ್ನಿಸುವುದಿಲ್ಲ. ತಮ್ಮದೇ ನಂಬಿಕೆ, ಭ್ರಮೆಯಲ್ಲಿರುತ್ತಾರೆ. ನಾವು ಎಷ್ಟೇ ಸಾಕ್ಷಿ ಒದಗಿಸಿದರೂ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ, ಕೆಲವರು ತಮ್ಮದೇ ಅಹಂ, ಧ್ವೇಷ ಭಾವನೆ ಹೊಂದಿರುತ್ತಾರೆ. ಅವರು ತಮ್ಮದೇ ತಪ್ಪಾಗಿದ್ದರೂ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
Krishnaveni K
Publish Date: Sat, 01 Jul 2023 (17:47 IST)
Updated Date: Sat, 01 Jul 2023 (17:49 IST)