Publish Date: Mon, 03 Jul 2023 (08:10 IST)
Updated Date: Mon, 03 Jul 2023 (08:43 IST)
ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆರೆಬಿಯನ್ ನಾಡಿಗೆ ಬಂದಿಳಿದಿದ್ದಾರೆ.
ಟೀಂ ಇಂಡಿಯಾದ ಬಹುತೇಕ ಆಟಗಾರರು ಮೊನ್ನೆಯೇ ವಿಂಡೀಸ್ ಗೆ ಬಂದಿಳಿದಿದ್ದರು. ಆದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಮ್ಮ ಕುಟುಂಬದ ಜೊತೆ ಪ್ರವಾಸದಲ್ಲಿದ್ದರಿಂದ ಬಂದಿರಲಿಲ್ಲ.
ಆದರೆ ಈಗ ರೋಹಿತ್ ಶರ್ಮಾ, ಯುವ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಜೊತೆ ಆಗಮಿಸಿದ್ದಾರೆ. ಆದರೆ ಲಂಡನ್ ಪ್ರವಾಸದಲ್ಲಿರುವ ಕೊಹ್ಲಿ ಮುಂದಿನ ವಾರವಷ್ಟೇ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.