Select Your Language

Notifications

webdunia
webdunia
webdunia
webdunia

ಈ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇದೇ ಕೊನೆಯ ವಿಶ್ವಕಪ್?

ಈ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇದೇ ಕೊನೆಯ ವಿಶ್ವಕಪ್?
ಮುಂಬೈ , ಭಾನುವಾರ, 2 ಜುಲೈ 2023 (08:14 IST)
ಮುಂಬೈ: ಈ ಬಾರಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೀಂ ಇಂಡಿಯಾದ ಕೆಲವು ಹಿರಿಯ ಕ್ರಿಕೆಟಿಗರ ಪಾಲಿಗೆ ಕೊನೆಯ ವಿಶ್ವಕಪ್ ಆಗುವ ಸಾಧ‍್ಯತೆಯಿದೆ. ಅವರು ಯಾರಿರಬಹುದು ನೋಡೋಣ.

ರೋಹಿತ್ ಶರ್ಮಾ: ನಾಯಕ ರೋಹಿತ್ ಶರ್ಮಾಗೆ ಈಗ 36 ವರ್ಷ. ಮುಂದಿನ ಏಕದಿನ ವಿಶ್ವಕಪ್ ವೇಳೆಗೆ ಅವರ ವಯಸ್ಸು 40 ರ ಗಡಿಯಲ್ಲಿರುತ್ತದೆ. ಅಲ್ಲಿಯವರೆಗೆ ಅವರು ಆಡುವುದೇ ಅನುಮಾನ.
ರವಿಚಂದ್ರನ್ ಅಶ್ವಿನ್: ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಈ ಬಾರಿ ವಿಶ್ವಕಪ್ ಗೆ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ. ಒಂದು ವೇಳೆ ಸ್ಥಾನ ಪಡೆದರೆ ಅದು ಅವರ ಕೊನೆಯ ವಿಶ್ವಕಪ್ ಆಗಬಹುದು.
ವಿರಾಟ್ ಕೊಹ್ಲಿ: ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಈಗ 35 ವರ್ಷ. ಬಹುಶಃ ಅವರು ಇರುವ ಫಿಟ್ನೆಸ್ ಗೆ ಇನ್ನೊಂದು ವಿಶ್ವಕಪ್ ಆಡಬಹುದೇನೋ ಎಂಬ ಭರವಸೆ ಅಭಿಮಾನಿಗಳಲ್ಲಿದೆ. ಆದರೆ ಇನ್ನು ನಾಲ್ಕು ವರ್ಷಗಳಲ್ಲಿ ಏನು ಬೇಕಾದರೂ ಆಗಬಹುದು.
ಮೊಹಮ್ಮದ್ ಶಮಿ: ವೇಗಿಗಳು ಬೇಗನೇ ನಿವೃತ್ತಿಯಾಗುತ್ತಾರೆ. ಹೀಗಾಗಿ 32 ವರ್ಷದ ಮೊಹಮ್ಮದ್ ಶಮಿಗೂ ಇದು ಕೊನೆಯ ವಿಶ್ವಕಪ್ ಆಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2027 ರವರೆಗೆ ಟೀಂ ಇಂಡಿಯಾಗೆ ಡ್ರೀಮ್ 11 ಸ್ಪಾನ್ಸರ್ಸ್: ಎಷ್ಟು ಕೋಟಿ ಒಪ್ಪಂದ?