Select Your Language

Notifications

webdunia
webdunia
webdunia
Wednesday, 9 April 2025
webdunia

ನಮ್ಮ ಧೋನಿ ಕೈಯಲ್ಲಿ ಚಪ್ಪಲಿ ಹಾಕಿಸ್ತೀರಾ ಎಂದು ಬೈದವರಿಗೆ ಸರಿಯಾಗಿಯೇ ಉತ್ತರ ಕೊಟ್ಟ ಪತ್ನಿ ಸಾಕ್ಷಿ!

ಧೋನಿ
ರಾಂಚಿ , ಗುರುವಾರ, 20 ಡಿಸೆಂಬರ್ 2018 (09:43 IST)
ರಾಂಚಿ: ಮೊನ್ನೆಯಷ್ಟೇ ಕ್ರಿಕೆಟಿಗ ಧೋನಿ ಕೈಯಲ್ಲಿ ಚಪ್ಪಲಿ ಹಾಕಿಸಿಕೊಂಡಿದ್ದ ಪತ್ನಿ ಸಾಕ್ಷಿ ಸಿಂಗ್ ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಟ್ರೋಲ್ ಗೊಳಗಾಗಿದ್ದರು.


ಧೋನಿಯಂತಹ ಮಹಾನ್ ಕ್ರಿಕೆಟಿಗನ ಕೈಯಲ್ಲಿ, ಅದೂ ನಮ್ಮ ಆರಾಧ್ಯ ದೈವದ ಕೈಯಲ್ಲಿ ಹೀಗೆ ಪಬ್ಲಿಕ್ ಆಗಿ ಚಪ್ಪಲಿ ಹಾಕಿಸಿಕೊಂಡು ಅವಮಾನ ಮಾಡುತ್ತೀರಾ ಎಂದು ಸಾಕ್ಷಿಗೆ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು.

ಇದಾದ ಬಳಿಕ ಇದೀಗ ಸಾಕ್ಷಿ ಮತ್ತೊಂದು ಫೋಟೋ ಹಾಕಿದ್ದು, ಅದರಲ್ಲಿ ಸಾಕ್ಷಿ ಕೈಗೆ ಧೋನಿ ಬ್ಯಾಂಡ್ ಕಟ್ಟುತ್ತಿದ್ದಾರೆ. ಈ ಫೋಟೋ ಜತೆಗೆ ಸಾಕ್ಷಿ ‘ಬ್ಯಾಂಡ್ ಗೆ ನೀವೇ ಹಣ ಕೊಟ್ಟಿರಿ, ಈಗ ಕಟ್ಟುವ ಕೆಲಸವೂ ನಿಮ್ಮದೇ’ ಎಂದು ಅಡಿಬರಹ ಬರೆದಿದ್ದಾರೆ. ಈ ಮೂಲಕ ತಮಗೆ ಟ್ರೋಲ್ ಮಾಡಿದವರಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ ಸಾಕ್ಷಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ನಾಯಕನ ಜತೆಗೆ ವಿರಾಟ್ ಕೊಹ್ಲಿ ಹೀಗಾ ವರ್ತಿಸೋದು!