Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ನಾಯಕನ ಜತೆಗೆ ವಿರಾಟ್ ಕೊಹ್ಲಿ ಹೀಗಾ ವರ್ತಿಸೋದು!

ಆಸ್ಟ್ರೇಲಿಯಾ ನಾಯಕನ ಜತೆಗೆ ವಿರಾಟ್ ಕೊಹ್ಲಿ ಹೀಗಾ ವರ್ತಿಸೋದು!
ಮೆಲ್ಬೋರ್ನ್ , ಗುರುವಾರ, 20 ಡಿಸೆಂಬರ್ 2018 (09:40 IST)
ಮೆಲ್ಬೋರ್ನ್: ವಿರಾಟ್ ಕೊಹ್ಲಿಯ ವರ್ತನೆ ಬಗ್ಗೆ ಮತ್ತೊಂದು ಅಪವಾದ ಕೇಳಿಬಂದಿದ್ದು, ಈ ಬಾರಿ ನಾಯಕ ಕೊಹ್ಲಿ ಸಾಕಷ್ಟು ಟೀಕೆಗೊಳಗಾಗಿದ್ದಾರೆ.


ಅದಕ್ಕೆ ಕಾರಣ ಅವರು ದ್ವಿತೀಯ ಟೆಸ್ಟ್ ಸೋತ ಬಳಿಕ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಜತೆಗೆ ನಡೆದುಕೊಂಡ ರೀತಿ. ಕೊಹ್ಲಿ ಪೇಯ್ನ್ ಕೈ ಕುಲುಕಲು ಬಂದಾಗ ಅವರನ್ನು ಅವಗಣಿಸಿ ಅವಮಾನ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಫೋಟೋ ನೋಡಿದ ಬಳಿಕ ಇದೀಗ ಕೊಹ್ಲಿ ವರ್ತನೆಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಆಸೀಸ್ ವೇಗಿ ಮಿಚೆಲ್ ಜಾನ್ಸನ್ ಕೊಹ್ಲಿ ವರ್ತನೆಯನ್ನು ಖಂಡಿಸಿದ್ದು, ಇದು ಅಗೌರವ ತೋರುವ ವರ್ತನೆ ಎಂದಿದ್ದಾರೆ. ಪಂದ್ಯದ ಫಲಿತಾಂಶ ಏನೇ ಆದರೂ ಅದರ ಬಳಿಕ ಇಬ್ಬರೂ ನಾಯಕರು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಸೌಜನ್ಯ ಉಳಿಸಿಕೊಳ್ಳಬೇಕು. ಆದರೆ ಕೊಹ್ಲಿ ಅದನ್ನು ಮೀರಿ ಅಗೌರವಯುತವಾಗಿ ಮತ್ತು ಸಿಲ್ಲಿ ಆಗಿ ನಡೆದುಕೊಂಡರು ಎಂದು ಜಾನ್ಸನ್ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಟೆಸ್ಟ್ ಏನಾದ್ರೂ ಸೋತರೆ ರವಿಶಾಸ್ತ್ರಿ, ಕೊಹ್ಲಿ ಕತೆ ಅಷ್ಟೇ..!!