Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಕೊಕ್: ಬಿಸಿಸಿಐ ನಿರ್ಧಾರ

Virat Kohli-Rohit Sharma-Ravindra Jadeja-Ravichandran Ashwin-Jasprit Bumrah

Krishnaveni K

ಮುಂಬೈ , ಸೋಮವಾರ, 4 ನವೆಂಬರ್ 2024 (09:17 IST)
Photo Credit: X
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹಿರಿಯ ಆಟಗಾರರ ಬ್ಯಾಟಿಂಗ್ ವೈಫಲ್ಯ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಸ್ಪಿನ್ ಪಿಚ್ ನಲ್ಲೂ ಪರದಾಡಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರನ್ನು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೈ ಬಿಡುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳ ಅಂತ್ಯಕ್ಕೆ ಟೆಸ್ಟ್ ಸರಣಿ ಆರಂಭವಾಗಲಿದೆ. ಇದು ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಮಹತ್ವದ ಸರಣಿಯಾಗಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದಯನೀಯ ವೈಫಲ್ಯ ಕಂಡಿದ್ದಾರೆ. ಇದು ಬಿಸಿಸಿಐ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ಕಾರಣಕ್ಕೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ರಂತಹ ಹಿರಿಯ ಆಟಗಾರರಿಗೆ ಕೊಕ್ ಕೊಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಅವರ ಬದಲು ಯುವ ಪ್ರತಿಭಾವಂತ ಆಟಗಾರನ್ನು ಕಳುಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದಕ್ಕೆ ಮೊದಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿಗೆ ಬಿಸಿಸಿಐ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರಲ್ಲಿ ವಿವರಣೆ ಕೇಳುವ ಸಾಧ್ಯತೆಯಿದೆ. ಇದೀಗ ಅಭಿಮಾನಿಗಳಿಂದಲೂ ಈ ಇಬ್ಬರು ಆಟಗಾರರ ನಿವೃತ್ತಿಗೆ ಒತ್ತಾಯ ಕೇಳಿಬರುತ್ತಿದ್ದು, ಒಂದು ವೇಳೆ ಆಸ್ಟ್ರೇಲಿಯಾ ಸರಣಿಗೆ ಇಬ್ಬರನ್ನೂ ಆಯ್ಕೆ ಮಾಡಿದರೂ ಈ ಸರಣಿಯಲ್ಲಿ ಫಾರ್ಮ್ ಸಾಬೀತುಪಡಿಸಲು ಗಡುವು ನೀಡುವ ಸಾಧ್ಯತೆಯಿದೆ. ಒಂದು ವೇಳೆ ಇಲ್ಲೂ ವಿಫಲರಾದರೆ ಮುಂದೆ ನಿವೃತ್ತಿಗೆ ಸೂಚಿಸಬಹುದು. ಅಂತೂ ಬಿಸಿಸಿಐ ದೊಡ್ಡ ನಿರ್ಧಾರವನ್ನೇ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಜವಾಬ್ಧಾರಿ ಬೇಡ್ವಾ, ಇಷ್ಟೊಂದು ಸೋಂಬೇರಿ ಆಗಿದ್ರೆ ತಂಡದಲ್ಲಿ ಯಾಕಿದ್ದೀರಿ