Select Your Language

Notifications

webdunia
webdunia
webdunia
webdunia

IND vs NZ: ನ್ಯೂಜಿಲೆಂಡ್ ನ 9 ವಿಕೆಟ್ ಗಳನ್ನು ಹಂಚಿಕೊಂಡ ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ

IND vs NZ Test

Krishnaveni K

ಮುಂಬೈ , ಶುಕ್ರವಾರ, 1 ನವೆಂಬರ್ 2024 (15:30 IST)
Photo Credit: X
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಪ್ರಥಮ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 235 ರನ್ ಗಳಿಗೆ ಆಲೌಟ್ ಆಗಿದೆ. ಕಿವೀಸ್ ನ 9 ವಿಕೆಟ್ ಗಳನ್ನು ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಹಂಚಿಕೊಂಡರು.

ಕಳೆದ ಪಂದ್ಯದಲ್ಲೂ ಮಿಂಚಿದ್ದ ವಾಷಿಂಗ್ಟನ್ ಸುಂದರ್ ಈ ಪಂದ್ಯದಲ್ಲೂ 4 ವಿಕೆಟ್ ಕಬಳಿಸಿ ಮಿಂಚಿದರೆ ಹಿರಿಯ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತೊಂದು 5 ವಿಕೆಟ್ ಗಳ ಗೊಂಚಲು ಪಡೆದರು. ವಿಪರ್ಯಾಸವೆಂದರೆ ರವಿಚಂದ್ರನ್ ಅಶ್ವಿನ್ ಗೆ ಒಂದೇ ಒಂದು ವಿಕೆಟ್ ಇಲ್ಲದೇ ಹೋಯಿತು. ಉಳಿದೊಂದು ವಿಕೆಟ್ ಆಕಾಶ್ ದೀಪ್ ಪಾಲಾಗಿತ್ತು.

ನ್ಯೂಜಿಲೆಂಡ್ ಪರ ಡೆರಿಲ್ ಮಿಚೆಲ್ 82 ಮತ್ತು ವಿಲ್ ಯಂಗ 71 ರನ್ ಗಳಿಸಿ ಮಿಂಚಿದರು. ಉಳಿದ ಬ್ಯಾಟಿಗರಿಂದ ಹೇಳಿಕೊಳ್ಳುವ ಸಾಧನೆ ಬರಲಿಲ್ಲ. ಒಂದು ಹಂತದಲ್ಲಿ ಮಿಚೆಲ್ ಮತ್ತು ಯಂಗ್ ಉತ್ತಮ ಜೊತೆಯಾಟವಾಡಿ ಅಪಾಯಕಾರಿ ಪರಿಣಮಿಸಿದರೂ  ಈ ಜೋಡಿಯನ್ನು ಬೇರ್ಪಡಿಸಲು ರವೀಂದ್ರ ಜಡೇಜಾ ಯಶಸ್ವಿಯಾದರು.

ಮೊಹಮ್ಮದ್ ಸಿರಾಜ್ ಮತ್ತೊಮ್ಮೆ ಆಟಕ್ಕುಂಟು ಲೆಕ್ಕಿಲ್ಲದ ಬೌಲಿಂಗ್ ಪ್ರದರ್ಶನ ನೀಡಿದರು. ಕಳೆದ ಎರಡು ಪಂದ್ಯಗಳಲ್ಲೂ ಬ್ಯಾಟಿಗರ ವೈಫಲ್ಯದಿಂದಾಗಿ ಟೀಂ ಇಂಡಿಯಾ ಸೋಲಬೇಕಾಯಿತು. ಈ ಪಂದ್ಯದಲ್ಲಿ ಆ ವೈಫಲ್ಯ ಮೀರಿ ಟೀಂ ಇಂಡಿಯಾ ಆಡಬಹುದು ಎಂಬ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೆ ಮತ್ತೆ ಅವಮಾನ ಮಾಡಿದ ಲಕ್ನೋ ಮಾಲಿಕ ಸಂಜಯ್ ಗೊಯೆಂಕಾ