Select Your Language

Notifications

webdunia
webdunia
webdunia
webdunia

IND vs NZ Test: ಟಾಸ್ ಗೆದ್ದ ನ್ಯೂಜಿಲೆಂಡ್, ಪ್ಲೇಯಿಂಗ್ ಇಲೆವೆನ್ ಬದಲಾವಣೆಗಳು ಇಲ್ಲಿದೆ

Rohit Sharma

Krishnaveni K

ಮುಂಬೈ , ಶುಕ್ರವಾರ, 1 ನವೆಂಬರ್ 2024 (09:14 IST)
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆಯಾಗಿದೆ.

ಟೀಂ ಇಂಡಿಯಾ ಈಗಾಗಲೇ ಎರಡೂ ಟೆಸ್ಟ್ ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿದೆ. ಆದರೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಜೊತೆಗೆ ವೈಟ್ ವಾಶ್ ಅವಮಾನವಾಗದಂತೆ ಗೆಲ್ಲುವ ಒತ್ತಡದಲ್ಲಿದೆ. ಈ ಪಂದ್ಯಕ್ಕೆ ಭಾರತ ಒಂದು ಬದಲಾವಣೆ ಮಾಡಿಕೊಂಡಿದೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು ಮೊಹಮ್ಮದ್ ಸಿರಾಜ್ ಆಡುತ್ತಿದ್ದಾರೆ. ಉಳಿದಂತೆ ಯಾವುದೇ ಬದಲಾವಣೆಯಿಲ್ಲ.

ಅತ್ತ ನ್ಯೂಜಿಲೆಂಡ್ ಕೂಡಾ ಕಳೆದ ಪಂದ್ಯದ ಹೀರೋ ಸ್ಯಾಂಟ್ನರ್ ಗಾಯಗೊಂಡಿರುವುದರಿಂದ ವಿಶ್ರಾಂತಿ ನೀಡಿದ್ದು ಇಶ್ ಸೋಧಿಗೆ ಅವಕಾಶ ನೀಡಿದೆ. ಟಿಮ್ ಸೌಥಿ ಬದಲಿಗೆ ಹೆನ್ರಿಗೆ ಅವಕಾಶ ನೀಡಿದೆ.

ಉಳಿದಂತೆ ತಂಡ ಇಂತಿದೆ:

ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಟಾಮ್ ಲಥಮ್ (ನಾಯಕ), ಡೆವನ್ ಕಾನ್ವೆ,  ವಿಲ್ ಯಂಗ್, ರಚಿನ್ ರವೀಂದ್ರ, ಡೆರಿಲ್ ಮಿಚೆಲ್, ಟಾಮ್ ಬ್ಲಂಡರ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಇಶ್ ಸೋಧಿ, ಮ್ಯಾಟ್ ಹೆನ್ರಿ, ಅಜಾಝ್ ಪಟೇಲ್, ವಿಲಿಯಮ್ ಒರೂರ್ಕಿ.

Share this Story:

Follow Webdunia kannada

ಮುಂದಿನ ಸುದ್ದಿ

ದುಡ್ಡಿಗಿಂತ ಆತ್ಮಗೌರವವೇ ದೊಡ್ಡದು ಎಂದು ನಿರ್ಧರಿಸಿದ ಕೆಎಲ್ ರಾಹುಲ್