Publish Date: Tue, 26 Jul 2022 (09:20 IST)
Updated Date: Tue, 26 Jul 2022 (09:30 IST)
ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಆಡಲು ಕ್ಯಾಪ್ಟನ್ ರೋಹಿತ್ ಶರ್ಮಾ ಕೆರೆಬಿಯನ್ ನಾಡಿಗೆ ಬಂದಿಳಿದಿದ್ದಾರೆ.
ಏಕದಿನ ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಈಗ ಟಿ20 ಸರಣಿ ವೇಳೆ ಮತ್ತೆ ತಂಡದ ನಾಯಕರಾಗುತ್ತಿದ್ದಾರೆ.
ರೋಹಿತ್ ಜೊತೆಗೆ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್, ದಿನೇಶ್ ಕಾರ್ತಿಕ್ ಕೂಡಾ ವಿಂಡೀಸ್ ಗೆ ಬಂದಿದ್ದಾರೆ. ಇಂಗ್ಲೆಂಡ್ ಸರಣಿ ಮುಗಿದ ಬಳಿಕ ರೋಹಿತ್ ಅಲ್ಲಿಯೇ ಕುಟುಂಬದ ಜೊತೆ ಕೆಲವು ದಿನಗಳ ಕಾಲ ಕಳೆದಿದ್ದರು. ಇದೀಗ ಇಂಗ್ಲೆಂಡ್ ನಿಂದಲೇ ನೇರವಾಗಿ ವಿಂಡೀಸ್ ಗೆ ಆಗಮಿಸಿದ್ದಾರೆ.