Select Your Language

Notifications

webdunia
webdunia
webdunia
Friday, 4 April 2025
webdunia

13 ವರ್ಷದ ಬಳಿಕ ಟೆಸ್ಟ್ ನಲ್ಲಿ 1000 ರನ್ ಪೂರೈಸಿದ ಪಾಕ್ ಕ್ರಿಕೆಟಿಗ ಫವಾದ್ ಆಲಂ!

ಫವಾದ್ ಆಲಂ
ಗಾಲೆ , ಸೋಮವಾರ, 25 ಜುಲೈ 2022 (16:50 IST)
ಗಾಲೆ: ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಗ ಫವಾದ್ ಆಲಂ ಟೆಸ್ಟ್ ಕ್ರಿಕೆಟ್ ನಲ್ಲಿ ವಿನೂತನ ದಾಖಲೆಯೊಂದನ್ನು ಮಾಡಿದ್ದಾರೆ! ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಬರೋಬ್ಬರಿ 13 ವರ್ಷಗಳ ಬಳಿಕ 1000 ರನ್ ಪೂರ್ತಿ ಮಾಡಿದ ದಾಖಲೆ ಮಾಡಿದ್ದಾರೆ!

ಹಾಗಿದ್ದರೆ ಇಷ್ಟು ವರ್ಷ ಅವರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ನಿಮಗೆ ಎದುರಾಗಬಹುದು. ಇಲ್ಲಿರುವುದು ಅಸಲಿ ಕತೆ. ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 24 ರನ್ ಗಳಿಸಿದ ಫವಾದ್ 1000 ರನ್ ಪೂರ್ತಿ ಮಾಡಿದರು.

2009 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಫವಾದ್ ಇದಕ್ಕೂ ಮೊದಲು ಕೇವಲ 28 ಇನಿಂಗ್ಸ್ ಆಡಿದ್ದರು. 11 ವರ್ಷ ಅವರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಪದಾರ್ಪಣೆ ಮಾಡಿದ 13 ವರ್ಷಗಳ ಬಳಿಕ 1000 ರನ್ ಪೂರೈಸಿದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವಿನ ಬಳಿಕ ತಂಡದ ಜೊತೆ ಶಿಖರ್ ಧವನ್ ಡ್ಯಾನ್ಸ್