Publish Date: Tue, 26 Jul 2022 (08:10 IST)
Updated Date: Tue, 26 Jul 2022 (08:52 IST)
ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಏಕದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡರೂ ಟೀಂ ಇಂಡಿಯಾ ಹಂಗಾಮಿ ನಾಯಕ ಶಿಖರ್ ಧವನ್ ಮೇಲೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಕಿಡಿ ಕಾರುತ್ತಿದ್ದಾರೆ. ಇದಕ್ಕೆ ಕಾರಣ ಅವರ ಬ್ಯಾಟಿಂಗ್.
ಮೊದಲ ಪಂದ್ಯದಲ್ಲಿ ಧವನ್ 97 ರನ್ ಗಳ ಇನಿಂಗ್ಸ್ ಆಡಿದ್ದರು. ದ್ವಿತೀಯ ಪಂದ್ಯದಲ್ಲಿ 13 ರನ್ ಗೆ ಔಟಾಗಿದ್ದರು. ಎರಡೂ ಪಂದ್ಯಗಳಲ್ಲೂ ಧವನ್ ನಿಧಾನಗತಿಯ ಇನಿಂಗ್ಸ್ ಆಡಿದ್ದರು. ಅದರಲ್ಲೂ ದ್ವಿತೀಯ ಪಂದ್ಯದಲ್ಲಂತೂ 13 ರನ್ ಗಳಿಸಲು ಬರೋಬ್ಬರಿ 31 ಎಸೆತ ಎದುರಿಸಿದ್ದರು!
ಶ್ರೇಯಸ್ ಅಯ್ಯರ್ ಕತೆಯೂ ಇದೇ ಆಗಿತ್ತು. ಅರ್ಧಶತಕ ಗಳಿಸಿದರೂ ಶ್ರೇಯಸ್ ಸಾಕಷ್ಟು ಬಾಲ್ ವ್ಯಯಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.