Publish Date: Tue, 26 Jul 2022 (08:20 IST)
Updated Date: Tue, 26 Jul 2022 (08:57 IST)
ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಆಡಲು ಟೀಂ ಇಂಡಿಯಾ ಕ್ರಿಕೆಟಿಗರಾದ ಕುಲದೀಪ್ ಯಾದವ್, ರವಿ ಬಿಷ್ಣೋಯ್ ಕೆರೆಬಿಯನ್ ನಾಡಿಗೆ ಬಂದಿಳಿದಿದ್ದಾರೆ.
ಕುಲದೀಪ್ ಯಾದವ್ ಕೂಡಾ ಗಾಯಾಳುವಾಗಿದ್ದರಿಂದ ಟಿ20 ಸರಣಿಯಲ್ಲಿ ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ ಆಡುತ್ತಾರೆ ಎನ್ನಲಾಗಿತ್ತು. ಇದೀಗ ಕುಲದೀಪ್ ಯಾದವ್ ಫಿಟ್ ಆಗಿದ್ದು ತಂಡವನ್ನು ಕೂಡಿಕೊಂಡಿದ್ದಾರೆ.
ಆದರೆ ಅತ್ತ ಕೊರೋನಾ ಸೋಂಕಿಗೊಳಗಾಗಿರುವ ಕೆಎಲ್ ರಾಹುಲ್ ಮಾತ್ರ ಇನ್ನೂ ಫಿಟ್ ಆಗಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಅವರು ಟಿ20 ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ.