ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಎಂದಿನಂತೇ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದ ಚೇತೇಶ್ವರ ಪೂಜಾರ ಮೇಲೆ ನಾಯಕ ರೋಹಿತ್ ಶರ್ಮಾ ಸಿಟ್ಟಿಗೆದ್ದ ಘಟನೆ ನಡೆದಿದೆ.
ಪೆವಿಲಿಯನ್ ನಲ್ಲಿ ಕುಳಿತು ಪೂಜಾರ ಬ್ಯಾಟಿಂಗ್ ವೀಕ್ಷಿಸುತ್ತಿದ್ದ ರೋಹಿತ್ ನಿಧಾನಗತಿಯ ಬ್ಯಾಟಿಂಗ್ ನಿಂದ ತಾಳ್ಮೆಗೆಟ್ಟರು. ರನ್ ಹರಿದುಬರುತ್ತಿಲ್ಲವೆಂಬ ಕಾರಣಕ್ಕೆ 12 ನೇ ಆಟಗಾರ ಇಶಾನ್ ಕಿಶನ್ ರನ್ನು ಕರೆದು ಪೂಜಾರಗೆ ಕೊಂಚ ದೊಡ್ಡ ಹೊಡೆತಕ್ಕೆ ಕೈ ಹಾಕಲು ಸೂಚನೆ ನೀಡಿ ಕಳುಹಿಸಿದರು.
ಅದರಂತೆ ಇಶಾನ್ ಮೈದಾನದಲ್ಲಿದ್ದ ಪೂಜಾರಗೆ ಸಂದೇಶ ತಲುಪಿಸಿದರು. ಇದರ ಬೆನ್ನಲ್ಲೇ ಪೂಜಾರ ಸಿಕ್ಸರ್ ಒಂದನ್ನು ಸಿಡಿಸಿದಾಗ ರೋಹಿತ್ ಮೊಗದಲ್ಲಿ ನಗು ಮೂಡಿತ್ತು. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.