Select Your Language

Notifications

webdunia
webdunia
webdunia
webdunia

ರೋಹಿತ್ ರನ್ನು ಮುಂಬೈ ನಾಯಕತ್ವದಿಂದ ಕಿತ್ತುಹಾಕಿದ್ದನ್ನು ಸಮರ್ಥಿಸಿದ ಕೋಚ್ ಗೆ ರಿತಿಕಾ ಟಾಂಗ್

Rohit Sharma family

Krishnaveni K

ಮುಂಬೈ , ಮಂಗಳವಾರ, 6 ಫೆಬ್ರವರಿ 2024 (14:51 IST)
ಮುಂಬೈ: ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕಿತ್ತು ಹಾಕಿದ್ದನ್ನು ಸಮರ್ಥಿಸಿದ ಕೋಚ್ ಮಾರ್ಕ್ ಬೌಚರ್ ಗೆ ರೋಹಿತ್ ಪತ್ನಿ ರಿತಿಕಾ ಸಜ್ ದೇ ಟಾಂಗ್ ಕೊಟ್ಟಿದ್ದಾರೆ.

ಪಾಡ್ ಕಾಸ್ಟ್ ನಲ್ಲಿ ಮುಂಬೈ ಮುಖ್ಯ ಕೋಚ್ ಮಾರ್ಕ್ ಬೌಚರ್ ರೋಹಿತ್ ರನ್ನು ನಾಯಕತ್ವದಿಂದ ಕಿತ್ತು ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ್ದರ ಅಸಲಿ ಕಾರಣವೇನೆಂದು ಬಹಿರಂಗಪಡಿಸಿದ್ದರು. ಭಾರತದಲ್ಲಿ ಬಹಳಷ್ಟು ಮಂದಿಗೆ ಇದು ಅರ್ಥವಾಗಲ್ಲ. ಯಾಕೆಂದರೆ ಅವರು ತುಂಬಾ ಭಾವನಾತ್ಮಕವಾಗಿರುತ್ತಾರೆ. ಈ ಭಾವನೆಗಳನ್ನು ದೂರವಿಡಿ. ಈ ನಿರ್ಧಾರದ ಹಿಂದೆ ಕೇವಲ ಕ್ರಿಕೆಟಿಂಗ್  ಕಾರಣವಿತ್ತೇ ಹೊರತು ಬೇರೇನೂ ಇಲ್ಲ ಎಂದಿದ್ದರು.

ರಿತಿಕಾ ಕಾಮೆಂಟ್
ಮಾರ್ಕ್ ಬೌಚರ್ ರ ಈ ಸಂದರ್ಶನಕ್ಕೆ ರೋಹಿತ್ ಪತ್ನಿ ರಿತಿಕಾ ಇನ್ ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿದ್ದು, ‘ಇದರಲ್ಲಿ ಹಲವು ತಪ್ಪುಗಳಿವೆ’ ಎಂದು ಕಾಮೆಂಟ್ ಮಾಡಿದ್ದಾರೆ. ರಿತಿಕಾರ ಈ ಕಾಮೆಂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ರನ್ನು ನಾಯಕತ್ವದಿಂದ ಕಿತ್ತು ಹಾಕಿದಾಗಲೂ ರಿತಿಕಾ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಮುಂಬೈ ಇಂಡಿಯನ್ಸ್ ತಂಡವನ್ನು ಅತೀ ಹೆಚ್ಚು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿಸಿದ ರೋಹಿತ್ ರನ್ನು ಇದ್ದಕ್ಕಿದ್ದಂತೆ ನಾಯಕತ್ವದಿಂದ ಕಿತ್ತು ಹಾಕಿ ಅವಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಫ್ರಾಂಚೈಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅನೇಕರು ಇನ್ನು ಮುಂದೆ ಮುಂಬೈ ಬೆಂಬಲಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಕೇವಲ ರಿತಿಕಾ ಮಾತ್ರವಲ್ಲ, ತಂಡದ ಸಹ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ಸೇರಿದಂತೆ ಹಲವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅಷ್ಟು ದಿನ ತಂಡದ ನಾಯಕರಾಗಿದ್ದ ರೋಹಿತ್ ಗೆ ಈ ರೀತಿ ಮಾಡಿದ್ದು ಹೃದಯ ಚೂರು ಮಾಡಿದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಗಳಿಗೆ ಕೊಹ್ಲಿ ಇರುತ್ತಾರಾ ಇಂದು ಸಿಗಲಿದೆ ಉತ್ತರ