Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾರ ಬಹುದೊಡ್ಡ ಸುಳ್ಳು ಬಯಲು ಮಾಡಿದ ರಿಷಬ್ ಪಂತ್

ರೋಹಿತ್ ಶರ್ಮಾರ ಬಹುದೊಡ್ಡ ಸುಳ್ಳು ಬಯಲು ಮಾಡಿದ ರಿಷಬ್ ಪಂತ್
ಮುಂಬೈ , ಬುಧವಾರ, 23 ಮಾರ್ಚ್ 2022 (09:50 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಮೈದಾನದ ಹೊರಗೂ ಅತ್ಯುತ್ತಮ ಸ್ನೇಹಿತರು. ಇದೀಗ ರಿಷಬ್, ರೋಹಿತ್ ಈ ಹಿಂದೆ ತಮ್ಮ ಬಗ್ಗೆ ಹೇಳಿದ್ದ ಸುಳ್ಳು ಬಯಲು ಮಾಡಿದ್ದಾರೆ.

ಕಳೆದ ವರ್ಷ ರೋಹಿತ್, ರಿಷಬ್ ತನ್ನ ರೂಂನಲ್ಲಿ ವಸ್ತುಗಳನ್ನು ನೀಟ್ ಆಗಿ ಇಟ್ಟುಕೊಳ್ಳಲ್ಲ ಎಂದು ಫೋಟೋ ಸಮೇತ ಪ್ರಕಟಿಸಿ ಕಾಲೆಳೆದಿದ್ದರು.

ಆದರೆ ಇದೀಗ ಒಂದು ವರ್ಷದ ಬಳಿಕ ರಿಷಬ್ ಆ ಘಟನೆಯ ನಿಜ ವಿಚಾರ ಬಯಲು ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ರಿಷಬ್, ಅಸಲಿಗೆ ಆ ರೂಂ ನನ್ನದಾಗಿರಲಿಲ್ಲ. ರೋಹಿತ್ ರ ರೂಂ ಅದಾಗಿತ್ತು. ನನ್ನನ್ನು ಪ್ಯಾಕ್ ಮಾಡಲು ಸಹಾಯ ಮಾಡುವಂತೆ ರೂಂಗೆ ಕರೆಸಿ ಆ ರೀತಿ ಎಲ್ಲರನ್ನೂ ಫೂಲ್ ಮಾಡಿದರು ಎಂದು ರಿಷಬ್ ಬಯಲು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಳೆದ ಐಪಿಎಲ್ ನ ಗರಿಷ್ಠ ರನ್ ಸರದಾರ ಪಟ್ಟಿ ಇಲ್ಲಿದೆ