Select Your Language

Notifications

webdunia
webdunia
webdunia
webdunia

ಜೊಹಾನ್ಸ್ ಬರ್ಗ್ ನಲ್ಲಿ ದಾಖಲೆ ಮಾಡಲಿದ್ದಾರೆ ಕಿಂಗ್ ಕೊಹ್ಲಿ

ಜೊಹಾನ್ಸ್ ಬರ್ಗ್ ನಲ್ಲಿ ದಾಖಲೆ ಮಾಡಲಿದ್ದಾರೆ ಕಿಂಗ್ ಕೊಹ್ಲಿ
ಜೊಹಾನ್ಸ್ ಬರ್ಗ್ , ಸೋಮವಾರ, 3 ಜನವರಿ 2022 (09:39 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ದಾಖಲೆಯೊಂದು ನಾಯಕ ಕೊಹ್ಲಿಯನ್ನು ಕಾಯುತ್ತಿದೆ.

ಸದ್ಯಕ್ಕೆ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ ಕೊಹ್ಲಿ ಒಂದು ವೇಳೆ ಇಲ್ಲಿ ಸಿಡಿದರೆ ಹೊಸ ದಾಖಲೆಯಾಗಲಿದೆ. ಜೊಹಾನ್ಸ್ ಬರ್ಗ್ ಅಂಗಣದಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಸದ್ಯಕ್ಕೆ ನ್ಯೂಜಿಲೆಂಡ್ ನ ಜಾನ್ ರೈಡ್ (316) ಹೆಸರಲ್ಲಿದೆ. ಕೊಹ್ಲಿ 310 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಒಂದು ವೇಳೆ ಕೊಹ್ಲಿ ಇಲ್ಲಿ ಕೇವಲ ಏಳು ರನ್ ಗಳಿಸಿದರೆ ಮೊದಲ ಸ್ಥಾನಕ್ಕೇರಲಿದ್ದಾರೆ. ಒಂದು ವೇಳೆ ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ಮೊದಲ ಬಾರಿಗೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದ ದಾಖಲೆ ಕೊಹ್ಲಿ ಬಳಗದ್ದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಕೆಂದೇ ಮಾಧ್ಯಮಗಳನ್ನು ಅವಾಯ್ಡ್ ಮಾಡ್ತಿದ್ದಾರಾ ಕೊಹ್ಲಿ? ದ್ರಾವಿಡ್ ಹೇಳಿದ್ದು ಹೀಗೆ!