Publish Date: Sun, 24 Jul 2022 (09:00 IST)
Updated Date: Sun, 24 Jul 2022 (09:18 IST)
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೂ ಮುನ್ನ ಗಾಯಗೊಂಡಿರುವ ಆಲ್ ರೌಂಡರ್ ರವೀಂದ್ರ ಜಡೇಜಾ ಸರಣಿಯ ಉಳಿದ ಪಂದ್ಯಗಳಲ್ಲೂ ಭಾಗಿಯಾಗುವುದು ಅನುಮಾನವಾಗಿದೆ.
ಜಡೇಜಾ ಮೊದಲ ಏಕದಿನ ಪಂದ್ಯಕ್ಕೆ ಮೊದಲು ನೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದರು. ಈಗಾಗಿ ಮೊದಲ ಏಕದಿನ ಪಂದ್ಯದಲ್ಲಿ ಅವರು ಆಡಿರಲಿಲ್ಲ.
ಇದೀಗ ಉಳಿದ ಪಂದ್ಯಕ್ಕೆ ಮೊದಲು ಅವರು ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ಏಕದಿನ ಸರಣಿಯನ್ನು ಅವರು ಮಿಸ್ ಮಾಡಿಕೊಳ್ಳುವ ಸಾಧ‍್ಯತೆ ಹೆಚ್ಚು.