Select Your Language

Notifications

webdunia
webdunia
webdunia
webdunia

ಕೊನೆಯ ಓವರ್ ನಲ್ಲಿ ಡೈವ್ ಹೊಡೆದು ಟೀಂ ಇಂಡಿಯಾ ಗೆಲ್ಲಿಸಿದ ಸಂಜು ಸ್ಯಾಮ್ಸನ್!

ಕೊನೆಯ ಓವರ್ ನಲ್ಲಿ ಡೈವ್ ಹೊಡೆದು ಟೀಂ ಇಂಡಿಯಾ ಗೆಲ್ಲಿಸಿದ ಸಂಜು ಸ್ಯಾಮ್ಸನ್!
ಟ್ರಿನಿಡಾಡ್ , ಶನಿವಾರ, 23 ಜುಲೈ 2022 (10:01 IST)
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಕಾರಣವಾಗಿದ್ದಕ್ಕೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಗೆ ನೆಟ್ಟಿಗರು ಹೊಗಳುತ್ತಿದ್ದಾರೆ.

ಕೊನೆಯ ಓವರ್ ನ ಎರಡು ಬಾಲ್ ಗಳಲ್ಲಿ ವಿಂಡೀಸ್ ಗೆ 8 ರನ್ ಬೇಕಾಗಿತ್ತು. ಟಿ20 ಜಮಾನದಲ್ಲಿ ಎರಡು ಎಸೆತಗಳಲ್ಲಿ 8 ರನ್ ಗಳಿಸುವುದು ದೊಡ್ಡ ವಿಷಯವೇ ಅಲ್ಲ. ಮೊಹಮ್ಮದ್ ಸಿರಾಜ್ ಎಸೆದ ಐದನೇ ಎಸೆತ ವೈಡ್ ಆಗಿತ್ತು. ಜೊತೆಗೆ ಆ ಬಾಲ್ ನ್ನು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಹಿಡಿಯದೇ ಹೋಗಿದ್ದರೆ ಅದು ಬೌಂಡರಿಯಾಗಿರುತ್ತಿತ್ತು. ಸಂಜು ಡೈವ್ ಹೊಡೆದು ಬಾಲ್ ತಡೆದು ಮೂರು ರನ್ ಸೇವ್ ಮಾಡಿದ್ದರು.

ಬಳಿಕ ಮುಂದಿನ ಎರಡು ಎಸೆತಗಳಲ್ಲಿ ವಿಂಡೀಸ್ ಗೆ ಕೇವಲ 3 ರನ್ ಗಳಿಸಲಷ್ಟೇ ಸಾಧ‍್ಯವಾಯಿತು. ಸಂಜು ಸ್ಯಾಮ್ಸನ್ ರ ಈ ಸಾಹಸವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್, ಕೊಹ್ಲಿ, ಧೋನಿ ವಿದೇಶೀ ಕ್ರಿಕೆಟ್ ಲೀಗ್ ನಲ್ಲಿ ಆಡಲು ಸಜ್ಜು?