Publish Date: Sat, 23 Jul 2022 (08:30 IST)
Updated Date: Sat, 23 Jul 2022 (08:58 IST)
ಟ್ರಿನಿಡಾಡ್: ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅಟೋಗ್ರಾಫ್ ಗಾಗಿ ಅಭಿಮಾನಿ ಮಹಿಳೆ 2 ಗಂಟೆ ಕಾದು ಕುಳಿತ ಘಟನೆ ನಡೆದಿದೆ.
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಒಳಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಮೈದಾನಕ್ಕೆ ಬಂದ ಅಭಿಮಾನಿ ಮಹಿಳೆ ಶಿಝಾರ ಶ್ರೇಯಸ್ ಅಯ್ಯರ್ ಅಟೋಗ್ರಾಫ್ ಪಡೆಯಲು ಕಾದು ಕುಳಿತಿದ್ದಾರೆ.
ಮಿನಿ ಬ್ಯಾಟ್ ನೀಡಿ ಕೊನೆಗೂ ಅಯ್ಯರ್ ಕೈಯಲ್ಲಿ ಸಹಿ ಹಾಕಿಸಿಕೊಂಡ ಖುಷಿ ಮಹಿಳೆಯದ್ದಾಗಿತ್ತು. ಮುಂದೆ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅವರಂತಹ ಬಿಗ್ ಪ್ಲೇಯರ್ಸ್ ಅಟೋಗ್ರಾಫ್ ಪಡೆಯುವ ಆಸೆಯಿದೆ ಎಂದು ಶಿಝಾರ ಹೇಳಿಕೊಂಡಿದ್ದಾರೆ.