Publish Date: Fri, 22 Jul 2022 (10:19 IST)
Updated Date: Fri, 22 Jul 2022 (10:20 IST)
ಬೆಂಗಳೂರು: ಶಸ್ತ್ರಚಿಕಿತ್ಸೆ ಮುಗಿಸಿ ಇನ್ನೇನು ಫಿಟ್ನೆಸ್ ಸಾಬೀತುಪಡಿಸಿ ಟೀಂ ಇಂಡಿಯಾಗೆ ಸೇರಬೇಕೆನ್ನುವಷ್ಟರಲ್ಲಿ ಕೆಎಲ್ ರಾಹುಲ್ ಗೆ ಕೊರೋನಾ ಕಂಟಕ ಎದುರಾಗಿದೆ.
ಬೆಂಗಳೂರಿನ ಎನ್ ಸಿಎನಲ್ಲಿ ಕಳೆದ ಕೆಲವು ದಿನಗಳಿಂದ ಫಿಟ್ನೆಸ್ ಮರಳಿ ಪಡೆಯಲು ಅಭ್ಯಾಸ ನಡೆಸುತ್ತಿದ್ದ ಕೆಎಲ್ ರಾಹುಲ್ ಗೆ ಈಗ ಕೊರೋನಾ ಸೋಂಕು ದೃಢಪಟ್ಟಿದೆ.
ಹೀಗಾಗಿ ಈಗ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ. ಜುಲೈ 29 ರಿಂದ ಟಿ20 ಸರಣಿ ಆರಂಭವಾಗಲಿದೆ. ಅದಕ್ಕಿಂತ ಮೊದಲು ಕೊರೋನಾದಿಂದ ಚೇತರಿಸಿಕೊಂಡು ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ ವಿಂಡೀಸ್ ಸರಣಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.