Publish Date: Sun, 24 Jul 2022 (08:50 IST)
Updated Date: Sun, 24 Jul 2022 (09:14 IST)
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ದ್ವಿತೀಯ ಏಕದಿನ ಪಂದ್ಯ ಇಂದು ನಡೆಯಲಿದೆ.
ಮೊದಲ ಏಕದಿನ ಪಂದ್ಯವನ್ನು ರೋಚಕವಾಗಿ ಗೆದ್ದಿದ್ದ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸರಣಿ ಗೆದ್ದಂತೆ. ಆದರೆ ತವರಿನಲ್ಲಿ ವಿಂಡೀಸ್ ಸೋಲಿಸುವುದು ಸುಲಭವಲ್ಲ ಎಂದು ಕಳೆದ ಪಂದ್ಯದಲ್ಲೇ ಸಾಬೀತಾಗಿತ್ತು.
ಮೊದಲ ಪಂದ್ಯದಲ್ಲಿ ವಿಂಡೀಸ್ ಬಲಿಷ್ಠ ಬ್ಯಾಟಿಂಗ್ ಪರಿಚಯವಾಗಿತ್ತು. ಅತ್ತ ಟೀಂ ಇಂಡಿಯಾಗೆ ಕೆಳ ಕ್ರಮಾಂಕದ ಬ್ಯಾಟಿಗರು ಸಿಡಿಯಬೇಕಾಗಿದೆ. ಇಂದು ಮತ್ತೊಮ್ಮೆ ಧವನ್ ಪಡೆ ಆಲ್ ರೌಂಡರ್ ಪ್ರದರ್ಶನ ನೀಡಿದರೆ ಮಾತ್ರ ಗೆಲುವು ಸಾಧ‍್ಯ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.