Publish Date: Sun, 24 Jul 2022 (08:30 IST)
Updated Date: Sun, 24 Jul 2022 (09:03 IST)
ಬೆಂಗಳೂರು: ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಗಾದೆ ಸದ್ಯಕ್ಕೆ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಗೆ ಸರಿಯಾಗಿಯೇ ಅನ್ವಯಿಸುತ್ತದೆ.
ಗಾಯದಿಂದಾಗಿ ಇಂಗ್ಲೆಂಡ್ ಸರಣಿ ಮಿಸ್ ಮಾಡಿಕೊಂಡಿದ್ದ ರಾಹುಲ್ ಶಸ್ತ್ರಚಿಕಿತ್ಸೆಗೊಳಗಾಗಿ ಈಗ ತಾನೇ ಫಿಟ್ ಆಗಿ ಮತ್ತೆ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎನ್ನುವಷ್ಟರಲ್ಲಿ ಕೊರೋನಾ ಕಾಟ ಎದುರಾಗಿದೆ. ಹೀಗಾಗಿ ನೆಟ್ಟಿಗರು ರಾಹುಲ್ ದುರಾದೃಷ್ಟದ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರಂತೂ ರಾಹುಲ್ ಗೆ ಶಾಂತಿ ಪೂಜೆ ಮಾಡಿಸಲು ಸಲಹೆ ಕೊಟ್ಟಿದ್ದಾರೆ! ಯಾಕೋ ನಿಮ್ಮ ಗ್ರಹಚಾರವೇ ಸರಿ ಇಲ್ಲ. ಏನೋ ದೋಷವಿರಬೇಕು. ಹೀಗಾಗಿ ಪೂಜೆ ಮಾಡಿಸಿ ಎಂದು ಸಲಹೆ ಕೊಡುತ್ತಿದ್ದಾರೆ!