ಹಾರ್ದಿಕ್ ಪಾಂಡ್ಯ ನೆರವಿಗೆ ನಿಂತ ರವಿಚಂದ್ರನ್ ಅಶ್ವಿನ್

Krishnaveni K
ಶನಿವಾರ, 30 ಮಾರ್ಚ್ 2024 (16:14 IST)
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಸತತ ಎರಡು ಸೋಲುಗಳ ಬಳಿಕ ತೀವ್ರ ಟೀಕೆಗೆ ಗುರಿಯಾಗಿರುವ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಪರ ರವಿಚಂದ್ರನ್ ಅಶ್ವಿನ್ ಮಾತನಾಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಈ ಆವೃತ್ತಿಗೆ ಯಶಸ್ವೀ ನಾಯಕ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಆ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ನೇಮಿಸಿತ್ತು. ಇದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಅದಾದ ಬಳಿಕ ಹಾರ್ದಿಕ್ ಆನ್ ಲೈನ್ ನಲ್ಲಿ ಟ್ರೋಲ್ ಆಗುತ್ತಲೇ ಇದ್ದರು.

ಇದೀಗ ಮೈದಾನದಲ್ಲೂ ಅವರನ್ನು ಮೂದಲಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಸತತ ಎರಡು ಸೋಲುಗಳ ಬಳಿಕವಂತೂ ಅಭಿಮಾನಿಗಳ ಟೀಕೆಗೆ ಇನ್ನಷ್ಟು ಹೆಚ್ಚಾಗಿದೆ. ಹಾರ್ದಿಕ್ ಗೆ ಅವಹೇಳನ ಮಾಡಲಾಗುತ್ತಿದೆ. ಇದರ ಬಗ್ಗೆ ಈಗ ಟೀಂ ಇಂಡಿಯಾ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಯೂ ಟ್ಯೂಬ್ ನಲ್ಲಿ ಮಾತನಾಡಿರುವ ಅಶ್ವಿನ್ ‘ಅಭಿಮಾನಿಗಳ ಕಲಹಕ್ಕೆ ಆಟಗಾರರು ಅಥವಾ ಫ್ರಾಂಚೈಸಿ ಜವಾಬ್ಧಾರಿಯಲ್ಲ. ಹಾರ್ದಿಕ್ ಧೋನಿಯಂತೆ ಎಲ್ಲಾ ಟೀಕೆಗಳಿಗೂ ಕಿವಿ ಬಂದ್ ಮಾಡಿ ತಮ್ಮ ಕೆಲಸದಲ್ಲಿ ಗಮನ ಹರಿಸಲು ಕಲಿಯಬೇಕು. ಇದು ಕ್ರಿಕೆಟ್, ಸಿನಿಮಾವಲ್ಲ. ಇಲ್ಲಿಯೂ ಮಾರ್ಕೆಟಿಂಗ್, ಬ್ರ್ಯಾಂಡ್ ಎಲ್ಲಾ ಇರಬಹುದು. ಆದರೆ ಸಿನಿಮಾಗಿಂತ ಇದು ಭಿನ್ನ. ಅಭಿಮಾನಿಗಳು ಯಾವತ್ತೂ ಇಷ್ಟು ಕೀಳುಮಟ್ಟಕ್ಕಿಳಿದು ಟೀಕೆ ಮಾಡಬಾರದು’ ಎಂದು ಅಶ್ವಿನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಕೆಎಲ್ ರಾಹುಲ್ ಔಟಾಗಿದ್ದಕ್ಕೆ ಅನಿಲ್ ಕುಂಬ್ಳೆ ಎಷ್ಟು ಸಿಟ್ಟಾದ್ರು ರಿಯಾಕ್ಷನ್ ನೋಡಿ video

ಸ್ಮೃತಿ ಮಂಧಾನ ತಂದೆ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಲಾಶ್ ಮುಚ್ಚಲ್‌, ಕಾರಣ ಏನ್ ಗೊತ್ತಾ

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ

ಮುಂದಿನ ಸುದ್ದಿ
Show comments