Publish Date: Thu, 24 Jan 2019 (09:58 IST)
Updated Date: Thu, 24 Jan 2019 (10:00 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ನ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ಆರಂಭಿಕ ಆಘಾತ ಸಿಕ್ಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ಇತ್ತೀಚೆಗಿನ ವರದಿ ಬಂದಾಗ 5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿದೆ. ರವಿಕಾಂತ್ ಸಮರ್ಥ್ ಶೂನ್ಯಕ್ಕೆ ಔಟಾಗಿ ಆಘಾತ ನೀಡಿದ್ದಾರೆ. ಈ ವಿಕೆಟ್ ಜಯದೇವ್ ಉನಾದ್ಕಟ್ ಪಾಲಾಗಿದೆ.
ಇದೀಗ ಕ್ರೀಸ್ ನಲ್ಲಿ 2 ರನ್ ಗಳಿಸಿರುವ ಮಯಾಂಕ್ ಅಗರ್ವಾಲ್ ಮತ್ತು 8 ರನ್ ಗಳಿಸಿರುವ ಸಿದ್ಧಾರ್ಥ್ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಕರ್ನಾಟಕ ದೇಗಾ ನಿಶ್ಚಲ್ ಮತ್ತು ಜಗದೀಶ್ ಸುಚಿತ್ ಗೆ ಸ್ಥಾನ ನೀಡಿಲ್ಲ. ಅತ್ತ ಸೌರಾಷ್ಟ್ರ ತಂಡದಲ್ಲಿ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ