Publish Date: Thu, 24 Jan 2019 (17:11 IST)
Updated Date: Thu, 24 Jan 2019 (17:12 IST)
ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ ಮೊದಲ ದಿನದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕಕ್ಕೆ ಆರಂಭದಲ್ಲಿಯೇ ಆಘಾತ ಸಿಕ್ಕಿತು. ರವಿಕಾಂತ್ ಸಮರ್ಥ್, ಮಯಾಂಕ್ ಅಗರ್ವಾಲ್, ಕೆ ಸಿದ್ಧಾರ್ಥ್, ಕರುಣ್ ನಾಯರ್ ಒಂದಂಕಿ ಮೊತ್ತಕ್ಕೆ ಔಟಾಗಿ ಕರ್ನಾಟಕದ ಕುಸಿತಕ್ಕೆ ಕಾರಣರಾದರು.
ಬಳಿಕ ಕೆಳಕ್ರಮಾಂಕದಲ್ಲಿ ನಾಯಕ ಮನೀಶ್ ಪಾಂಡೆ (62) ಶ್ರೇಯಸ್ ಗೋಪಾಲ್ (87) ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ದಿನದಂತ್ಯಕ್ಕೆ 74 ರನ್ ಗಳಿಸಿರುವ ಶ್ರೀನಿವಾಶ್ ಶರತ್ ಮತ್ತು ಇನ್ನೂ ಖಾತೆ ತೆರೆಯದ ರೋಹಿತ್ ಮೋರೆ ಕ್ರೀಸ್ ನಲ್ಲಿದ್ದಾರೆ. ಸೌರಾಷ್ಟ್ರ ಪರ ಉತ್ತಮ ದಾಳಿ ಸಂಘಟಿಸಿದ ಜಯದೇವ್ ಉನಾದ್ಕಟ್ ನಾಲ್ಕು ವಿಕೆಟ್ ಕಿತ್ತರೆ, ಕಮಲೇಶ್ ಮಖ್ವಾನ 3 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ