Publish Date: Fri, 03 Jan 2020 (09:05 IST)
Updated Date: Fri, 03 Jan 2020 (09:06 IST)
ಮುಂಬೈ: ಹೊಸ ವರ್ಷದ ಆರಂಭದಲ್ಲೇ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಹೊಸ ಸವಾಲು ಎದುರಾಗಿದೆ. ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಇಂದು ಪ್ರಬಲ ಮುಂಬೈ ವಿರುದ್ಧ ಸೆಣಸಲಿದೆ.
ಇಂದಿನಿಂದ ಜನವರಿ 6 ರವರೆಗೆ ಮುಂಬೈಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ಪಂದ್ಯ ಆಡಲಿದೆ. ಇದುವರೆಗೆ ಉಭಯ ತಂಡಗಳು ರಣಜಿ ಟೂರ್ನಿಯಲ್ಲಿ 26 ಪಂದ್ಯಗಳಲ್ಲಿ ಎದುರುಬದುರಾಗಿದೆ. ಇದರಲ್ಲಿ ಕೇವಲ 3 ಗೆಲುವು ಕಂಡಿದ್ದು, 10 ರಲ್ಲಿ ಸೋಲನುಭವಿಸಿದೆ.
ಹೀಗಾಗಿ ಮೇಲ್ನೋಟಕ್ಕೆ ಮುಂಬೈ ಪ್ರಬಲವಾಗಿದೆ. ಅದೂ ಸಾಲದೆಂಬಂತೆ ಕರ್ನಾಟಕಕ್ಕೆ ಮಯಾಂಗ್ ಅಗರ್ವಾಲ್ ಅಲಭ್ಯತೆ ಕಾಡಲಿದೆ. ಬಿಸಿಸಿಐ ನಿರ್ದೇಶನದಂತೆ ಮಯಾಂಕ್ ಗೆ ವಿಶ್ರಾಂತಿ ನೀಡಲಾಗಿದೆ. ಅತ್ತ ಕೆಎಲ್ ರಾಹುಲ್ ಕೂಡಾ ತಂಡದಲ್ಲಿಲ್ಲ. ಅತ್ತ ಮುಂಬೈಗೆ ಅಜಿಂಕ್ಯಾ ರೆಹಾನೆ, ಪೃಥ‍್ವಿ ಶಾ, ಶ್ರಾದ್ಧೂಲ್ ಠಾಕೂರ್ ಅವರಂತಹ ಪ್ರತಿಭಾವಂತರ ಬಲವಿದೆ. ಹೀಗಾಗಿ ಮುಂಬೈ ಸೋಲಿಸುವುದು ಕರ್ನಾಟಕಕ್ಕೆ ಕಷ್ಟವಾಗಲಿದೆ. ಪಂದ್ಯ ಬೆಳಿಗ್ಗೆ 9.30 ಕ್ಕೆ ಆರಂಭವಾಗಲಿದೆ.