Publish Date: Thu, 02 Jan 2020 (09:17 IST)
Updated Date: Thu, 02 Jan 2020 (09:20 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿನ ಕಳೆದಂತೆ ನಾಯಕನಾಗಿ ಪರಿಪಕ್ವರಾಗುತ್ತಿದ್ದಾರೆ ಎಂದು ಕೋಚ್ ರವಿಶಾಸ್ತ್ರಿ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ ದಿನ ಕಳೆದಂತೆ ಪರಿಪಕ್ವವಾಗುತ್ತಿದ್ದಾರೆ. ಕೊಹ್ಲಿಯಲ್ಲಿ ಇರುವ ಆಸಕ್ತಿ, ಶ್ರದ್ಧೆ, ಕ್ರಿಕೆಟ್ ಮೈದಾನದಲ್ಲಿ ತೋರುವ ಹಪಹಪಿತನ ಯಾರಿಗೂ ಸಾಟಿ ಇಲ್ಲದ್ದು ಎಂದು ರವಿಶಾಸ್ತ್ರಿ ಶಿಷ್ಯನ ಗುಣಗಾನ ಮಾಡಿದ್ದಾರೆ.
‘ಇನ್ನಷ್ಟು ಕ್ರಿಕೆಟ್ ಪಂದ್ಯಗಳಲ್ಲಿ ಅನುಭವ ಗಳಿಸಿದಂತೆ ತಾಂತ್ರಿಕವಾಗಿ ಕೊಹ್ಲಿ ಮತ್ತಷ್ಟು ಪರಿಪಕ್ವವಾಗಲಿದ್ದಾರೆ. ಪ್ರತಿಯೊಬ್ಬನೂ ಅನುಭವದಿಂದ ಪಾಠ ಕಲಿಯುತ್ತಾನೆ. ಕೊಹ್ಲಿಯೂ ಅದನ್ನೇ ಮಾಡುತ್ತಿದ್ದಾರೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.