Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಮಯಾಂಕ್ ಶತಕದ ಮೇಲೊಂದು ಶತಕ

ರಣಜಿ ಟ್ರೋಫಿ ಕ್ರಿಕೆಟ್: ಮಯಾಂಕ್ ಶತಕದ ಮೇಲೊಂದು ಶತಕ
ದೆಹಲಿ , ಸೋಮವಾರ, 27 ನವೆಂಬರ್ 2017 (17:02 IST)
ದೆಹಲಿ: ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮೂರನೇ ದಿನದಂತ್ಯಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ.
 

ಪ್ರಥಮ ಇನಿಂಗ್ಸ್ ನಲ್ಲಿ ಉತ್ತಮ ಆಟವಾಡುತ್ತಿದ್ದ ರೈಲ್ವೇಸ್ ದಿಡೀರ್ ಕುಸಿತ ಕಂಡು 333 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಕರ್ನಾಟಕಕ್ಕೆ 101 ರನ್ ಗಳ ಮುನ್ನಡೆ ಸಿಕ್ಕಿತು.

ನಂತರ ದ್ವಿತೀಯ ಸರದಿ ಆರಂಭಿಸಿದ ಕರ್ನಾಟಕದ ಪರ ಆರಂಭಿಕ ರವಿಕಾಂತ್ ಸಮರ್ಥ್ ಅರ್ಧಶತಕ ಬಾರಿಸಿ ಔಟಾದರು. ಬಳಿಕ ದೇಗಾ ನಿಶ್ಚಲ್ ಮತ್ತು ಮಯಾಂಕ್ ಅಗರ್ವಾಲ್ ಆಟದ ನೆರವಿನಿಂದ ದಿನದಂತ್ಯಕ್ಕೆ ವಿಕೆಟ್ ನಷ್ಟಕ್ಕೆ ರನ್ ಗಳಿಸಿದೆ. ಪ್ರಥಮ ಇನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಮಯಾಂಕ್ ದ್ವಿತೀಯ ಸರದಿಯಲ್ಲೂ ಶತಕ ಭಾರಿಸಿ ತನ್ನ ಭರ್ಜರಿ ಫಾರ್ಮ್ ಪ್ರದರ್ಶಿಸಿದರು.

ಕರ್ನಾಟಕಕ್ಕೆ ಇದೀಗ 309 ರನ್ ಗಳ ಮುನ್ನಡೆ ಸಿಕ್ಕಿದೆ. ನಾಳೆ ಒಂದು ದಿನದ ಪಂದ್ಯ ಬಾಕಿಯಿದ್ದು, ಡ್ರಾ ಆದರೂ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವುದರಿಂದ ಕರ್ನಾಟಕಕ್ಕೆ ಅಂತಹ ನಷ್ಟವೇನೂ ಇಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಗೆಲುವಿನಲ್ಲಿ ಅಶ್ವಿನ್ ವಿಶ್ವದಾಖಲೆ