Publish Date: Mon, 27 Nov 2017 (11:25 IST)
Updated Date: Mon, 27 Nov 2017 (11:27 IST)
ದೆಹಲಿ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತ 434 ರನ್ ಬೆನ್ನತ್ತಿದ್ದ ರೈಲ್ವೇಸ್ ದಿಟ್ಟ ಉತ್ತರ ನೀಡುತ್ತಿದೆ.
ಇತ್ತೀಚೆಗಿನ ವರದಿ ಬಂದಾಗ ರೈಲ್ವೇಸ್ 6 ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿದೆ. ರೈಲ್ವೇಸ್ ಪರ ಮಹೇಶ್ ರಾವತ್ ಶತಕ ಗಳಿಸಿದ್ದಾರೆ. ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತ ದಾಟಲು ರೈಲ್ವೇಸ್ ಗೆ ಇನ್ನೂ 130 ರನ್ ಗಳ ಅಗತ್ಯವಿದೆ.
ಆದರೆ ಮಹೇಶ್ ರಾವತ್ ಕ್ರೀಸ್ ನಲ್ಲಿದ್ದರೆ ಇದು ಕಷ್ಟವೇನಲ್ಲ. ಇದಕ್ಕೂ ಮೊದಲು ರೈಲ್ವೇಸ್ ಪರ ಅರಿಂದಮ್ ಘೋಷ್ ಜತೆಗೆ ಮಹೇಶ್ ರಾವ್ ಉತ್ತಮ ಜತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ದುರದೃಷ್ಟವಶಾತ್ ಅರಿಂದಮ್ 91 ರನ್ ಗಳಿಸಿ ಔಟಾದರು. ಕರ್ನಾಟಕ ಪರ ಅಭಿಮನ್ಯು ಮಿಥುನ್, ಕೆ. ಗೌತಮ್ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಹಂಚಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ