Publish Date: Mon, 27 Nov 2017 (08:34 IST)
Updated Date: Mon, 27 Nov 2017 (08:36 IST)
ನವದೆಹಲಿ: ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಅದಕ್ಕೀಗ ಮಾಜಿ ನಾಯಕ ಧೋನಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ದ. ಆಫ್ರಿಕಾದಂತಹ ರಾಷ್ಟ್ರಕ್ಕೆ ಪ್ರವಾಸ ಮಾಡುವ ಮೊದಲು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಆಟಗಾರರಿಗೆ ಸಮಯ ನೀಡಬೇಕು. ಈ ರೀತಿ ಬಿಡುವಿಲ್ಲದೇ ಆಡುವುದು ಆಟಗಾರನಿಗೆ ದೊಡ್ಡ ಸವಾಲು ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಈಗಿನ ತಂಡದಲ್ಲಿ ಹೆಚ್ಚಿನವರಿಗೆ ವಿದೇಶದಲ್ಲಿ ಆಡಿದ ಅನುಭವವಿದೆ. ಹಾಗಾಗಿ ಅವರು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲರು. ಹಾಗಿದ್ದರೂ 8 ರಿಂದ 10 ದಿನ ಬಿಡುವು ಸಿಕ್ಕರೆ ಅವರಿಗೂ ಉತ್ತಮ ಪರ್ಫಾರ್ಮೆನ್ಸ್ ಕೊಡಲು ಸಾಧ್ಯವಿದೆ ಎಂದು ಧೋನಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ