Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಗೆಲುವಿನಲ್ಲಿ ಅಶ್ವಿನ್ ವಿಶ್ವದಾಖಲೆ

ಟೀಂ ಇಂಡಿಯಾ ಗೆಲುವಿನಲ್ಲಿ ಅಶ್ವಿನ್ ವಿಶ್ವದಾಖಲೆ
ನಾಗ್ಪುರ , ಸೋಮವಾರ, 27 ನವೆಂಬರ್ 2017 (13:52 IST)
ನಾಗ್ಪುರ: ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಇನಿಂಗ್ಸ್ ಮತ್ತು 239 ರನ್ ಗಳಿಂದ ಗೆದ್ದುಕೊಂಡಿದೆ. ದ್ವಿತೀಯ ಇನಿಂಗ್ಸ್ ನಲ್ಲಿ 166 ರನ್ ಗಳಿಗೆ ಆಲೌಟ್ ಆಯಿತು.
 

ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಕಿತ್ತಿದ್ದ ರವಿಚಂದ್ರನ್ ಅಶ್ವಿನ್ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಕಿತ್ತಿದ್ದಾರೆ. ಭಾರತದ ಪರ ದ್ವಿಶತಕ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠರಾದರು.

ಊಟದ ವಿರಾಮಕ್ಕೆ ಆಗುವಾಗ 8 ವಿಕೆಟ್ ಉದುರಿಸಿಕೊಂಡಿದ್ದ ಲಂಕಾ ನಂತರ ಬೆಗನೇ ತನ್ನ  ಇನಿಂಗ್ಸ್ ಮುಗಿಸಿತು. ಈ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಗಳಿಸಿದ ಅಶ್ವಿನ್ ವಿಶ್ವ ದಾಖಲೆ ಮಾಡಿದರು.  ಅತಿ ಕಡಿಮೆ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಪಡೆದ ಡೆನಿಸ್ ಲಿಲ್ಲಿ ದಾಖಲೆ ಮುರಿದ ಅಶ್ವಿನ್ ಈ ಕ್ಯಾಲೆಂಡರ್ ವರ್ಷದಲ್ಲಿ 50 ವಿಕೆಟ್ ಪಡೆದ ದಾಖಲೆಯನ್ನೂ ಮಾಡಿದರು.

ಇದರೊಂದಿಗೆ ಮೂರು             ಟೆಸ್ಟ್ ಪಂದ್ಯಗಳ ಸರಣಿ 1-0 ಅಂತರದಿಂದ ಟೀಂ ಇಂಡಿಯಾ ಮನ್ನಡೆ ಸಾಧಿಸಿತು. ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಲಂಕಾ ಸಿಲುಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಕ್ಸರ್ ಮೇಲೆ ಸಿಕ್ಸರ್ ಹೊಡೆದ ಲಂಕಾ ಬ್ಯಾಟ್ಸ್ ಮನ್ ಗೆ ಅಶ್ವಿನ್ ಕೊಟ್ಟ ಹೊಡೆತ ಹೇಗಿತ್ತು ಗೊತ್ತಾ?!