Select Your Language

Notifications

webdunia
webdunia
webdunia
webdunia

ಸಿಕ್ಸರ್ ಮೇಲೆ ಸಿಕ್ಸರ್ ಹೊಡೆದ ಲಂಕಾ ಬ್ಯಾಟ್ಸ್ ಮನ್ ಗೆ ಅಶ್ವಿನ್ ಕೊಟ್ಟ ಹೊಡೆತ ಹೇಗಿತ್ತು ಗೊತ್ತಾ?!

ಸಿಕ್ಸರ್ ಮೇಲೆ ಸಿಕ್ಸರ್ ಹೊಡೆದ ಲಂಕಾ ಬ್ಯಾಟ್ಸ್ ಮನ್ ಗೆ ಅಶ್ವಿನ್ ಕೊಟ್ಟ ಹೊಡೆತ ಹೇಗಿತ್ತು ಗೊತ್ತಾ?!
ನಾಗ್ಪುರ , ಸೋಮವಾರ, 27 ನವೆಂಬರ್ 2017 (11:37 IST)
ನಾಗ್ಪುರ: ಟೀಂ ಇಂಡಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಶ್ರೀಲಂಕಾ ತಿಣುಕಾಡುತ್ತಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ನಾಲ್ಕನೇ ದಿನದ ಊಟದ ವಿರಾಮದ ವೇಳೆಗೆ ಲಂಕಾ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಒದ್ದಾಡುತ್ತಿದೆ.
 

ನಾಯಕ ಚಂಡಿಮಾಲ್ 53 ರನ್ ಗಳಿಸಿ ಏಕಮಾತ್ರ ಭರವಸೆಯಾಗಿ ಉಳಿದಿದ್ದಾರೆ. ಹಾಗಿದ್ದರೂ ಇನ್ನೂ 260 ರನ್ ಹಿನ್ನಡೆ ಇರುವುದರಿಂದ ಸೋಲು ತಪ್ಪಿಸಿಕೊಳ್ಳುವುದು ತೀರಾ ಕಷ್ಟದ ಕೆಲಸವಾಗಿ ಉಳಿದಿದೆ.

ಭಾರತದ ಪರ ಮೊದಲು ಘಾತಕ ದಾಳಿ ಸಂಘಟಿಸಿದ ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ 1 ವಿಕೆಟ್ ಉಮೇಶ್ ಯಾದವ್ ಪಾಲಾಗಿದೆ.

ಈ ನಡುವೆ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಕಬಳಿಸಿದ್ದ ರವಿಚಂದ್ರನ್ ಅಶ್ವಿನ್ ಅವರ ಒಂದೇ ಓವರ್ ನಲ್ಲಿ ಲಂಕಾ ಬ್ಯಾಟ್ಸ್ ಮನ್ ಶನಕಾ ಎರಡು ಸಿಕ್ಸರ್ ಒಂದು ಬೌಂಡರಿ ಹೊಡೆದು ಗಾಯದ ಮೇಲೆ ಬರೆ ಎಳೆದರು. ಮತ್ತೆ ನಡೆದಿದ್ದು ಮ್ಯಾಜಿಕ್! ಮರು ಓವರ್ ನಲ್ಲೇ ಅಶ್ವಿನ್ ಶನಕಾ ವಿಕೆಟ್ ಕಿತ್ತು ಸೇಡು ತೀರಿಸಿಕೊಂಡರು.

ಅದಾದ ಬಳಿಕ ಒಂದಾದ ಮೇಲೆ ಒಂದರಂತೆ ಎರಡು ಓವರ್ ಗಳಲ್ಲಿ ಮೂರು ವಿಕೆಟ್ ಕಿತ್ತ ಅಶ್ವಿನ್ ಎದುರಾಳಿಗೆ ಎಚ್ಚರಿಕೆ ನೀಡಿದರು. ವಿಶೇಷವೆಂದರೆ  ಈ ಇನಿಂಗ್ಸ್ ನಲ್ಲಿ ಮೊದಲ ಟೆಸ್ಟ್ ನಲ್ಲಿ ಡಿಆರ್ ಎಸ್ ವಿವಾದಕ್ಕೆ ಕಾರಣವಾಗಿದ್ದ ದಿಲ್ರುವಾನ್ ವಿಕೆಟ್ ನ್ನು ಅಶ್ವಿನ್ ಎಲ್ ಬಿ ಮೂಲಕ ಪಡೆದರು. ಆದರೆ ಈ ಬಾರಿಯೂ ಡಿಆರ್ ಎಸ್ ಗೆ ಮನವಿ ಸಲ್ಲಿಸಿದ್ದ ದಿಲ್ರುವಾನ್ ಅದರಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ: ಕರ್ನಾಟಕದ ಹುಡುಗರಿಗೆ ನಿರೀಕ್ಷಿಸದ ಉತ್ತರ ಕೊಟ್ಟ ರೈಲ್ವೇಸ್