Select Your Language

Notifications

webdunia
webdunia
webdunia
webdunia

Rajat Patidar: ಆರ್ ಸಿಬಿ ಅಭಿಮಾನಿಗಳ ಆತಂಕ ನಿವಾರಸಿದ ರಜತ್ ಪಾಟೀದಾರ್

Rajat Patidar

Krishnaveni K

ಬೆಂಗಳೂರು , ಗುರುವಾರ, 15 ಮೇ 2025 (16:12 IST)
Photo Credit: X
ಬೆಂಗಳೂರು: ಐಪಿಎಲ್ 2025 ಬ್ರೇಕ್ ಬಳಿಕ ಮೇ 17 ರಿಂದ ಆರಂಭವಾಗಲಿದೆ. ಇದಕ್ಕೆ ಮುನ್ನ ಆರ್ ಸಿಬಿ ನಾಯಕ ರಜತ್ ಪಾಟೀದಾರ್ ಅಭಿಮಾನಿಗಳ ಆತಂಕ ನಿವಾರಸಿದ್ದಾರೆ.

ರಜತ್ ಪಾಟೀದಾರ್ ಗಾಯದಿಂದ ಬಳಲುತ್ತಿದ್ದು ಮುಂದಿನ ಪಂದ್ಯಕ್ಕೆ ಅಲಭ್ಯ ಎಂದು ವರದಿಯಾಗಿತ್ತು. ಆದರೆ ಇದೀಗ ರಜತ್ ಪಾಟೀದಾರ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಆರ್ ಸಿಬಿ ಹಂಚಿಕೊಂಡಿದ್ದು ಅಭಿಮಾನಿಗಳ ಆತಂಕ ನಿವಾರಣೆಯಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದಾಗಿ ಐಪಿಎಲ್ ಗೆ ಕಿರು ಅವಧಿಯ ಬ್ರೇಕ್ ಸಿಕ್ಕಿತ್ತು. ಇದು ರಜತ್ ಪಾಟೀದಾರ್ ಪಾಲಿಗೆ ವರವಾಯಿತು. ಈ ಬ್ರೇಕ್ ನಿಂದಾಗಿ ಅವರು ಗಾಯದಿಂದ ಚೇತರಿಸಿಕೊಳ್ಳುವಂತಾಗಿದೆ.

ಮುಂದಿನ ಪಂದ್ಯ ಅವರು ಆಡುವುದು ಬಹುತೇಕ ನಿಶ್ಚಿತವಾಗಿದೆ. ಈ ಐಪಿಎಲ್ ನಲ್ಲಿ ಆರ್ ಸಿಬಿ ನಾಯಕರಾಗಿರುವ ರಜತ್ ವೈಯಕ್ತಿಕವಾಗಿಯೂ ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಆರ್ ಸಿಬಿ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಇದೀಗ ಕೊನೆಯ ಹಂತದಲ್ಲಿ ರಜತ್ ಉಪಸ್ಥಿತಿ ತಂಡಕ್ಕೆ ಅಗತ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Boycott Delhi Capitals ಟ್ರೆಂಡ್: ಭಾರತ ವಿರೋಧಿ ದೇಶದ ಆಟಗಾರನೇ ಕಾರಣ