ಮುಂಬೈ: ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರತ ವಿರೋಧಿ ದೇಶವೊಂದರ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸಿದ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಡೆಲ್ಲಿ ಕ್ಯಾಪಿಟಲ್ಸ್ ಅಭಿಯಾನ ಜೋರಾಗಿದೆ.
ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಬಳಿಕ ಐಪಿಎಲ್ ಮೇ 17 ರಿಂದ ಪುನರಾರಂಭಗೊಳ್ಳಲಿದೆ. ಇದರ ನಡುವೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತನ್ನ ತಂಡಕ್ಕೆ ಬಾಂಗ್ಲಾದೇಶ ಮೂಲದ ಮುಸ್ತಾಪಿಝುರ್ ರೆಹಮಾನ್ ರನ್ನು ಸೇರಿಸಿಕೊಂಡಿದೆ.
ಇದು ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿದ್ದಾಗ ಬಾಂಗ್ಲಾದೇಶ ಬಹಿರಂಗವಾಗಿಯೇ ಪಾಕಿಸ್ತಾನಕ್ಕೆ ಬೆಂಬಲಿಸಿ ಮಾತನಾಡಿತ್ತು. ಇದೀಗ ಅದೇ ದೇಶದ ಆಟಗಾರನನ್ನು ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಸಿಕೊಂಡಿದೆ.
ಇದು ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಜೊತೆ ಸೇರಿ ನಮ್ಮ ದೇಶದ ವಿರುದ್ಧವೇ ಮಾತನಾಡುವ ದೇಶವೊಂದರ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಅಗತ್ಯವೇನಿದೆ? ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ನಡೆಸಲಾಗುತ್ತಿದೆ. ಇಂತಹ ದೇಶದ ಆಟಗಾರನನ್ನು ಕರೆತರಲು ನಾಚಿಕೆಯಾಗಲ್ವಾ ಎಂದು ನೆಟ್ಟಿಗರು ಕಿಡಿ ಕಾರಿದ್ದು ಡೆಲ್ಲಿ ಕ್ಯಾಪಿಟಲ್ಸ್ ಬಹಿಷ್ಕರಿಸಿ ಕರೆ ನೀಡಿದ್ದಾರೆ.