Select Your Language

Notifications

webdunia
webdunia
webdunia
webdunia

IPL 2025: ಐಪಿಎಲ್ 2025 ರ ಹೊಸ ವೇಳಾಪಟ್ಟಿ ವಿವರ

Virat Kohli

Krishnaveni K

ಮುಂಬೈ , ಮಂಗಳವಾರ, 13 ಮೇ 2025 (09:56 IST)
ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನದಿಂದಾಗಿ ಅರ್ಧಕ್ಕೇ ನಿಂತಿದ್ದ ಐಪಿಎಲ್ 2025 ಪುನರಾರಂಭಗೊಳ್ಳಲಿದ್ದು ಹೊಸ ವೇಳಾಪಟ್ಟಿ ಪ್ರಕಟವಾಗಿದೆ.

ಮೇ 17 ರಿಂದ ಐಪಿಎಲ್ 2025 ಉಳಿದ ಪಂದ್ಯಗಳು ಆರಂಭವಾಗಲಿದೆ. ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಸೇರಿದಂತೆ ಒಟ್ಟು 6 ತಾಣಗಳಲ್ಲಿ ಉಳಿದ ಪಂದ್ಯಗಳು ನಡೆಯಲಿದೆ. ಆದರೆ ಪ್ಲೇ ಆಫ್ ಪಂದ್ಯ ನಡೆಯುವ ಸ್ಥಳ ಇನ್ನೂ ನಿಗದಿಯಾಗಿಲ್ಲ.

ಮೇ 8 ರಂದು ಡೆಲ್ಲಿ ಮತ್ತು ಪಂಜಾಬ್ ನಡುವೆ ನಡೆಯುತ್ತಿದ್ದ ಪಂದ್ಯಕ್ಕೆ ಅರ್ಧಕ್ಕೇ ನಿಂತಿತ್ತು. ಆ ಪಂದ್ಯ ಈಗ ಮೇ 24 ಕ್ಕೆ ನಡೆಯಲಿದೆ.

ವೇಳಾಪಟ್ಟಿ ಇಲ್ಲಿದೆ
ಮೇ 17: ಆರ್ ಸಿಬಿ ವರ್ಸಸ್ ಕೆಕೆಆರ್ (ಚಿನ್ನಸ್ವಾಮಿ) ರಾತ್ರಿ 7.30
ಮೇ 18: ಆರ್ ಆರ್ ವರ್ಸಸ್ ಪಂಜಾಬ್ (ಜೈಪುರ) ಮಧ್ಯಾಹ್ನ 3.30 ಮತ್ತು ಡಿಸಿ ವರ್ಸಸ್ ಗುಜರಾತ್ (ದೆಹಲಿ) ರಾತ್ರಿ 7.30 ಕ್ಕೆ
ಮೇ 19: ಎಲ್ಎಸ್ ಜಿ ವರ್ಸಸ್ ಎಸ್ ಆರ್ ಎಚ್ (ಹೈದರಾಬಾದ್) ರಾತ್ರಿ 7.30
ಮೇ 20: ಸಿಎಸ್ ಕೆ ವರ್ಸಸ್ ಆರ್ ಆರ್ (ದೆಹಲಿ) ರಾತ್ರಿ 7.30
ಮೇ 21: ಮುಂಬೈ ವರ್ಸಸ್ ಡಿಸಿ (ಮುಂಬೈ) ರಾತ್ರಿ 7.30
ಮೇ 22: ಜಿಟಿ ವರ್ಸಸ್ ಎಲ್ಎಸ್ ಜಿ (ಅಹಮ್ಮದಾಬಾದ್) ರಾತ್ರಿ 7.30
ಮೇ 23: ಆರ್ ಸಿಬಿ ವರ್ಸಸ್ ಎಸ್ಆರ್ ಎಚ್ (ಬೆಂಗಳೂರು) ರಾತ್ರಿ 7.30
ಮೇ 24: ಪಂಜಾಬ್ ವರ್ಸಸ್ ಡಿಸಿ (ಜೈಪುರ) ರಾತ್ರಿ 7.30
ಮೇ 25: ಜಿಟಿ ವರ್ಸಸ್ ಸಿಎಸ್ ಕೆ (ಅಹಮ್ಮದಾಬಾದ್) ಮಧ್ಯಾಹ್ನ 3.30
ಮೇ 25: ಎಸ್ಆರ್ ಎಚ್ ವರ್ಸಸ್ ಕೆಕೆಆರ್ (ದೆಹಲಿ) ರಾತ್ರಿ 7.30
ಮೇ 26: ಪಂಜಾಬ್ ವರ್ಸಸ್ ಮುಂಬೈ ರಾತ್ರಿ 7.30
ಮೇ 27: ಎಲ್ಎಸ್ ಜಿ ವರ್ಸಸ್ ಆರ್ ಸಿಬಿ (ಬೆಂಗಳೂರು) ರಾತ್ರಿ7.30

ಪ್ಲೇ ಆಫ್ ಪಂದ್ಯಗಳು
ಮೇ 29: ಮೊದಲ ಕ್ವಾಲಿಫೈಯರ್ ರಾತ್ರಿ 7.30
ಮೇ 30: ಎಲಿಮಿನೇಟರ್ ರಾತ್ರಿ 7.30
ಜೂನ್ 1: ಕ್ವಾಲಿಫೈಯರ್ 2 ರಾತ್ರಿ 7.30
ಜೂನ್ 3: ಫೈನಲ್ ರಾತ್ರಿ 7.30

Share this Story:

Follow Webdunia kannada

ಮುಂದಿನ ಸುದ್ದಿ

Virat Kohli retirement: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯ ಪಂದ್ಯವನ್ನೂ ನೀಡದೇ ಗೇಟ್ ಪಾಸ್