ಮುಂಬೈ: ದೇಶ ವಿಪತ್ತಿನಲ್ಲಿರುವಾಗ ಯಾವುದೂ ದೊಡ್ಡದಲ್ಲ. ಈ ಕಾರಣಕ್ಕೇ ಈಗ ಬಿಸಿಸಿಐ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ರದ್ದುಗೊಳಿಸಲು ತೀರ್ಮಾನಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯೊಂದೇ ಬಾಕಿಯಿದೆ.
ನಿನ್ನೆ ಪಾಕ್ ಪಡೆಗಳ ದಾಳಿ ಹಿನ್ನಲೆಯಲ್ಲಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಡೆಲ್ಲಿ ಮತ್ತು ಪಂಜಾಬ್ ನಡುವಿನ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತಗೊಳಿಸಲಾಯಿತು. ಬಳಿಕ ತಕ್ಷಣವೇ ಅಭಿಮಾನಿಗಳನ್ನು ಮೈದಾನದಿಂದ ತೆರವುಗೊಳಿಸಲಾಯಿತು.
ಇದೀಗ ಸುರಕ್ಷತಾ ದೃಷ್ಟಿಯಿಂದ ಐಪಿಎಲ್ 2025 ರ ಮುಂದಿನ ಪಂದ್ಯಗಳನ್ನೇ ಬಿಸಿಸಿಐ ರದ್ದುಗೊಳಿಸಲು ತೀರ್ಮಾನಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿದೆ. ಅದರಲ್ಲೂ ಇಂತಹ ಸಂದರ್ಭದಲ್ಲಿ ಜನ ಹೆಚ್ಚು ಸೇರುವ ತಾಣಗಳನ್ನು ಶತ್ರುರಾಷ್ಟ್ರ ಗುರಿಯಾಗಿಸುವ ಅಪಾಯ ಹೆಚ್ಚು.
ಈ ಕಾರಣಕ್ಕೆ ಸೇನೆಗೆ ಭದ್ರತೆ ಒದಗಿಸುವುದೇ ಸವಾಲು. ಜೊತೆಗೆ ಜನರ ಸುರಕ್ಷತೆಯೂ ಮುಖ್ಯವಾಗುತ್ತದೆ. ಹೀಗಾಗಿ ಈಗ ಐಪಿಎಲ್ ರದ್ದುಗೊಳಿಸಲು ಬಿಸಿಸಿಐ ತೀರ್ಮಾನಿಸಿದೆ.