ಮುಂಬೈ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟವಾಗಿದ್ದು, ಯಾವ ಆಟಗಾರರಿಗೆ ಯಾವ ಶ್ರೇಣಿ, ಎಷ್ಟು ವೇತನ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಕಳೆದ ಬಾರಿ ಕಡೆಗಣಿಸಲ್ಪಟ್ಟಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ರನ್ನು ಮತ್ತೆ ಗುತ್ತಿಗೆ ಲಿಸ್ಟ್ ಗೆ ಸೇರಿಸಿಕೊಳ್ಳಲಾಗಿರುವುದು ವಿಶೇಷ. ಬಿಸಿಸಿಐ ವಾರ್ಷಿ ಗುತ್ತಿಗೆ ಪಡೆಯಲು ಒಂದು ಅವಧಿಯಲ್ಲಿ 3 ಟೆಸ್ಟ್, 8 ಏಕದಿನ ಮತ್ತು 10 ಟಿ20 ಪಂದ್ಯವಾಡಿರಬೇಕು.
ಯಾವ ಆಟಗಾರರಿಗೆ ಯಾವ ಶ್ರೇಣಿ?
ಎ ಪ್ಲಸ್- ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ.
ಗ್ರೇಡ್ ಎ- ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ರಿಷಭ್ ಪಂತ್.
ಗ್ರೇಡ್ ಬಿ- ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ- ರಿಂಕು ಸಿಂಗ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮ, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷ್ ದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ರಜತ್ ಪಾಟೀದಾರ್, ಧ್ರುವ ಜ್ಯುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮ,
ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.
ವೇತನ ವಿವರ
ಎಪ್ಲಸ್ ಗ್ರೇಡ್-7 ಕೋಟಿ ರೂ.
ಗ್ರೇಡ್ ಎ-5 ಕೋಟಿ ರೂ.
ಗ್ರೇಡ್ ಬಿ- 3 ಕೋಟಿ ರೂ.
ಗ್ರೇಡ್ ಸಿ-1 ಕೋಟಿ ರೂ.