ಮುಂಬೈ: ಟೆಸ್ಟ್ ಫಾರ್ಮ್ಯಾಟ್ ನಲ್ಲಿ ರೋಹಿತ್ ಶರ್ಮಾ ಇನ್ನು ಕ್ಯಾಪ್ಟನ್ ಆಗಿರಲ್ಲ ಎಂಬೆಲ್ಲಾ ವದಂತಿಗಳಿಗೆ ತೆರೆ ಬಿದ್ದಿದೆ. ಅಭಿಮಾನಿಗಳಿಗೆ ಬಿಸಿಸಿಐ ಗುಡ್ ನ್ಯೂಸ್ ಕೊಟ್ಟಿದೆ.
ರೋಹಿತ್ ಶರ್ಮಾ ನಾಯಕರಾಗಿ ಕಳೆದ ಎರಡು ಟೆಸ್ಟ್ ಸರಣಿಗಳನ್ನು ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಇದಾದ ಬಳಿಕ ಆಸ್ಟ್ರೇಲಿಯಾ ಸರಣಿಯ ಕೊನೆಯ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದರು. ಹೀಗಾಗಿ ಮುಂದೆ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕರಾಗಲಿದ್ದಾರೆ ಎಂಬ ಮಾತುಗಳಿತ್ತು.
ಆದರೆ ಈಗ ಅದೆಲ್ಲವೂ ಸುಳ್ಳಾಗಿದೆ. ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ರೋಹಿತ್ ಶರ್ಮಾರೇ ನಾಯಕ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಈ ಮೂಲಕ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತುಹಾಕಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಬಿದ್ದಂತಾಗಿದೆ. ಸದ್ಯಕ್ಕಂತೂ ಟೀಂ ಇಂಡಿಯಾ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದು ಖಚಿತವಾಗಿದೆ.