Select Your Language

Notifications

webdunia
webdunia
webdunia
webdunia

Rahul Dravid: ವಾಲ್ ರಾಹುಲ್ ದ್ರಾವಿಡ್ ಗೆ ಇಂದು ಜನ್ಮದಿನ: ಟೀಂ ಇಂಡಿಯಾ ಬಿಟ್ಟ ಮೇಲೆ ದ್ರಾವಿಡ್ ಎಲ್ಲಿದ್ದಾರೆ

Rahul Dravid

Krishnaveni K

ಬೆಂಗಳೂರು , ಶನಿವಾರ, 11 ಜನವರಿ 2025 (09:06 IST)
ಬೆಂಗಳೂರು: ವಿಶ್ವ ಕ್ರಿಕೆಟ್ ಕಂಡ ಅದ್ಭುತ ಪ್ರತಿಭೆ, ಟೀಂ ಇಂಡಿಯಾದ ವಾಲ್ ಎಂದೇ ಜನಪ್ರಿಯವಾಗಿರುವ ರಾಹುಲ್ ದ್ರಾವಿಡ್ ಗೆ ಇಂದು ಜನ್ಮದಿನ. ಕೋಚ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ದ್ರಾವಿಡ್ ಈಗ ಎನು ಮಾಡ್ತಿದ್ದಾರೆ ಗೊತ್ತಾ?

ಟೀಂ ಇಂಡಿಯಾದಲ್ಲಿ ಆಟಗಾರನಾಗಿ ಮಾತ್ರವಲ್ಲ, ಕೋಚ್ ಆಗಿಯೂ ಅತ್ಯಂತ ಯಶಸ್ವೀ ಪಾತ್ರ ನಿಭಾಯಿಸಿದವರು ದ್ರಾವಿಡ್. ಅವರು ಕೋಚ್ ಆಗಿದ್ದಾಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದ್ದಲ್ಲದೆ ಏಕದಿನ ವಿಶ್ವಕಪ್ ಫೈನಲ್ ಗೂ ಹೋಗಿ ಬಂದಿತ್ತು.  ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ದ್ರಾವಿಡ್ ಕೂಡಾ ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದರು.

ಅವರ ಬಳಿಕ ಟೀಂ ಇಂಡಿಯಾಗೆ ಗೌತಮ್ ಗಂಭೀರ್ ಕೋಚ್ ಆಗಿ ಬಂದರೂ ತಂಡದ ಸ್ಥಿತಿ ಈಗ ಹಳ್ಳ ಹಿಡಿದಿದೆ. ಹೀಗಾಗಿ ಅಭಿಮಾನಿಗಳು ದ್ರಾವಿಡ್ ರನ್ನು ಈಗಲೂ ನೆನೆಸಿಕೊಳ್ಳುತ್ತಾರೆ. ಕೋಚ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ದ್ರಾವಿಡ್ ಕೆಲವು ದಿನ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.

ಅದಾದ ಬಳಿಕ ಅವರು ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೂಡಿಕೊಂಡರು. ಈಗ ಬಿಡುವು ಸಿಕ್ಕಾಗಲೆಲ್ಲಾ ರಾಜಸ್ಥಾನ್ ಕ್ಯಾಂಪ್ ನಲ್ಲಿ ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿರುತ್ತಾರೆ. ಇನ್ನೇನು ಐಪಿಎಲ್ ಶುರುವಾಗಲಿದ್ದು, ದ್ರಾವಿಡ್ ಹವಾ ರಾಜಸ್ಥಾನ್ ತಂಡದಲ್ಲಿ ಮತ್ತೆ ನೋಡಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ಸಸ್ ಕೊಡು ದೇವ್ರೇ ಎಂದು ಫ್ಯಾಮಿಲಿ ಸಮೇತ ಬಾಬ ಭೇಟಿಯಾದ ವಿರಾಟ್ ಕೊಹ್ಲಿ: ವಿಡಿಯೋ