Select Your Language

Notifications

webdunia
webdunia
webdunia
webdunia

ಚಹಲ್ ಬಳಿಕ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗನಿಂದ ಪತ್ನಿಗೆ ವಿಚ್ಛೇದನ

Wedding

Krishnaveni K

ಬೆಂಗಳೂರು , ಶುಕ್ರವಾರ, 10 ಜನವರಿ 2025 (12:06 IST)
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಯಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮ ವಿಚ್ಛೇದನ ವದಂತಿಗಳ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ವಿಚ್ಛೇದನ ಸುದ್ದಿ ಕೇಳಿಬರುತ್ತಿದೆ.

ಅವರು ಬೇರೆ ಯಾರೂ ಅಲ್ಲ, ಕರ್ನಾಟಕ ಮೂಲದ ಕ್ರಿಕೆಟಿಗ ಮನೀಶ್ ಪಾಂಡೆ. ಕೆಲವು ದಿನಗಳಿಂದಲೂ ಮನೀಶ್ ವಿಚ್ಛೇದನದ ಸುದ್ದಿ ಕೇಳಿಬರುತ್ತಲೇ ಇತ್ತು. ಇದೀಗ ಮತ್ತೊಮ್ಮೆ ಮನೀಶ್ ಮತ್ತು ಪತ್ನಿ ಆಶ್ರಿತಾ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.

ಮನೀಶ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪತ್ನಿ ಜೊತೆಗಿನ ಎಲ್ಲಾ ಫೋಟೋಗಳನ್ನೂ ಡಿಲೀಟ್ ಮಾಡಿರುವುದು ಈ ಅನುಮಾನ ಬಲಗೊಳ್ಳುವಂತೆ ಮಾಡಿದೆ. ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ಗಳ ದಾಂಪತ್ಯ ವಿರಸ ಮೊದಲು ಗೊತ್ತಾಗುವುದೇ ಇನ್ ಸ್ಟಾ ಪುಟದ ಮೂಲಕ.

ಇಬ್ಬರೂ ಇನ್ ಸ್ಟಾಗ್ರಾಂ ನಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿರುವುದು ಈಗ ವಿಚ್ಛೇದನ ವದಂತಿಗಳನ್ನು ಬಲಗೊಳಿಸಿದೆ. ಮೂಲತಃ ನಟಿಯಾಗಿರುವ ಆಶ್ರಿತಾ ಮತ್ತು ಕ್ರಿಕೆಟಿಗ ಮನೀಶ್ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ಇದೀಗ ಐದು ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಲಿದ್ದಾರೆ ಎಂದು ಸುದ್ದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಜ್ವೇಂದ್ರ ಚಹಲ್ ಗೆ ಧನಶ್ರೀವರ್ಮ ಇಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟಿದ್ದಾರಂತೆ